

ಕೊಪ್ಪಳ: ಬೇಸಿಗೆ ರಜೆ ಕಳೆದಿದ್ದು ಗುರುವಾರದಿಂದ ಶಾಲೆ ಮರು ಆರಂಭವಾಗಿವೆ. ತಳಿರು ತೋರಣಗಳಿಂದ ಶಾಲೆ ಸಿಂಗರಿಸಿದ ಶಿಕ್ಷಕರ ವರ್ಗ ಮಕ್ಕಳಿಗೆ ಪುಷ್ಪ ನೀಡಿ, ಹೂ ಮಳೆಗೆರದು ಸ್ವಾಗತ ಕೋರಿತು.
ಜಿಲ್ಲೆಯಲ್ಲಿ 184 ಸರ್ಕಾರಿ ಪ್ರೌಢ ಶಾಲೆ ಹಾಗೂ 959 ಪ್ರಾಥಮಿಕ ಶಾಲೆಗಳಿವೆ. ಶೇ.70ರಷ್ಟು ಪಠ್ಯ ಪುಸ್ತಕಗಳನ್ನು ಶಾಲೆಗೆ ಮುಟ್ಟಿಸಲಾಗಿದೆ. ಬಾಕಿ ಪುಸ್ತಕಗಳು ಬರಬೇಕಿದೆ. ಗುರುವಾರ ಶಾಲೆ ಆರಂಭ ಹಿನ್ನೆಯಲ್ಲಿ ಚಿಣ್ಣರು ಖುಷಿಯಿಂದಲೇ ಶಾಲೆಗಳತ್ತ ಮುಖ ಮಾಡಿದರು. ಬೇಸಿಗೆ ರಜೆ ಮುಗಿದಿದ್ದು ಮತ್ತೆ ಬ್ಯಾಗ್ ಹಿಡಿದು, ಶಾಲಾ ಸಮವಸ್ತ್ರ ಧರಿಸಿ ಸ್ಕೂಲ್ಗೆ ಬಂದರು. ನಗರದ ವಿವಿಧ ಶಾಲೆಗಳು ಸೇರಿ ಗ್ರಾಮೀಣ ಭಾಗದ ಶಾಲೆಗಳಲ್ಲೂ ಮಕ್ಕಳನ್ನು ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ವಿಶೇಷ ದಾಖಲಾತಿ ಆಂದೋಲನವು ನಡೆದಿದೆ. ಗ್ರಾಮೀಣ ಭಾಗಗಳಲ್ಲಿ ಗ್ರಾಮಗಳಲ್ಲಿ ಸಂಚರಿಸಿ ಶಾಲೆಯಿಂದ ವಿಮುಖರಾಗುವ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಂತೆ ಶಿಕ್ಷಕರು, ಮಕ್ಕಳು ಜಾಗೃತಿ ಮೂಡಿಸುತ್ತಿದ್ದಾರೆ.
ತೆಂಗಿನ ಗರಿ, ಮಾವಿನ ತಳಿರು ತೋರಣ ಹಾಗೂ ಹೂಗಳಿಂದ ಶಾಲೆಗಳನ್ನು ಸಿಂಗರಿಸಿದ್ದು ಕಂಡುಬಂತು. ಮಕ್ಕಳು ಶಾಲೆಗೆ ಬರುತ್ತಲೇ ಅವರಿಗೆ ಪುಷ್ಪ ನೀಡಿ ಸ್ವಾಗತ ಕೋರಲಾಯಿತು. ಮೊದಲ ದಿನ ನಿರೀೆಯಷ್ಟು ಮಕ್ಕಳು ಬರದಿದ್ದರೂ ಕೆಲ ಚಿಣ್ಣರು ಶಾಲೆಗಳಲ್ಲಿ ಕಾಣಿಸಿಕೊಂಡರು. ತಮ್ಮ ಸ್ನೇಹಿತರು ಹಾಗೂ ಬೋಧಕರನ್ನು ಕಂಡು ಹರ್ಷಪಟ್ಟರು.