

ಕೊಪ್ಪಳ: ಸರ್ಕಾರಿ ಶಾಲೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಬಹದ್ದೂರಬಂಡಿ ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ ಹೇಳಿದರು.
ಶಾಲೆಯಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಾಲೆಯ ಶೈಕ್ಷಣಿಕ ಅಭಿವೃದ್ದಿಗಾಗಿ ಅನೇಕ ಕೆಲಸ,ಕಾರ್ಯಗಳು ಬಾಕಿ ಇವೆ. ಅವುಗಳನ್ನು ಶೀಘ್ರವೇ ಪರಿಹರಿಸಲಾಗುವುದು. ಶಾಲೆಯ ಅಭಿವೃದ್ಧಿಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವೆ. ಚಿಕ್ಕ ವಯಸ್ಸಿಗೆ ಅಧ್ಯಕ್ಷ ಹುದ್ದೆ ಸಿಕ್ಕಿದೆ. ಸರಿಯಾಗಿ ಬಳಸಿಕೊಂಡು ಗ್ರಾಮದ ಅಭಿವರದ್ಧಿಗೆ ಶ್ರಮಿಸುವೆ ಎಂದರು.
ಮುಖ್ಯ ಶಿಕ್ಷಕ ಬೀರಪ್ಪ ಮಾತನಾಡಿ, ಶಾಲೆಗೆ ಮೂಲ ಸೌಕರ್ಯಗಳ ಅವಶ್ಯವಿದೆ. ಅವುಗಳನ್ನು ಕಲ್ಪಿಸಿದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ಗ್ರಾಪಂ ಸದಸ್ಯ ಶೇಖರಪ್ಪ ಗಂಟಿ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಕುರಿ, ಸದಸ್ಯರಾದ ಬಾಬಾ ಕಿಲ್ಲೇದಾರ, ಮೈಲಪ್ಪ ಕಂಬದಮನಿ,ದರೀಯಾಸಾಬ ಕಾತರಕಿ, ಅಡಿವೇಪ್ಪ ಮೂರಪಡಿ, ಶಿಕ್ಷಕರಾದ ಭಾರತಿ ಹವಳೆ, ಪೂರ್ಣಿಮಾ ತುಪ್ಪದ, ಹನುಮವ್ವ, ಮಮತಾ, ಮೀರಾಜುನ್ನಿಸಾ, ಗಂಗಮ್ಮ ಕಪರಶೆಟ್ಟರ ಇತರರಿದ್ದರು.