

ಕೊಪ್ಪಳ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರೊಂದಿಗೆ ಅನುಚಿತವಾಗಿ ವರ್ತಿಸಿದ ವಕೀಲನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಮೂಲಕ ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೋರ್ಟ್ ಕಲಾಪ ನಡೆವ ವೇಳೆ ಶೂ ಎಸೆದಿದ್ದು ಸರಿಯಲ್ಲ. ದೇಶದ ಸಂವಿಧಾನ, ಸವೋರ್ಚ್ಚ ನ್ಯಾಯಾಲಯಕ್ಕೆ ಗೌರವವಿದೆ. ಅದನ್ನು ಕಾಪಾಡುವುದು ಎಲ್ಲರ ಕರ್ತವ್ಯ. ನ್ಯಾಯಾಧೀಶ ಬಿ.ಆರ್.ಗವಾಯಿ ಅವರತ್ತ ಶೂ ಎಸೆದಿದ್ದು ಸರಿಯಲ್ಲ. ಇದು ದೇಶಕ್ಕೆ, ಸಂವಿಧಾನಕ್ಕೆ ಮಾಡಿದ ಅಪಮಾನ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪು$್ಪ ಸಂದೇಶ ಹೋಗುವುದನ್ನು ತಡೆಯಬೇಕು. ಮುಂದೆ ಇಂಥ ಟನೆಗಳಾಗದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.
ಸಂದ ಪದಾಧಿಕಾರಿಗಳಾದ ಪ್ರಾಣೇಶ ಪೂಜಾರ, ಮಂಜುನಾಥ ಮ್ಯಾಗಳಮನಿ, ಹನುಮಂತಪ್ಪ ಛಲವಾದಿ, ಹೇಮಣ್ಣ ಕವಲೂರು, ನಾಗರಾಜನಾಯಕ ಡೊಳ್ಳಿನ, ಬಾಳಪ್ಪ ಕಾಳೆ, ಪರಶುರಾಮ ಭಾವಿ, ಮೋಹನ, ಚಂದ್ರಕಾಂತ ದೇವರ ಮನಿ, ಗವಿಸಿದ್ದಪ್ಪ ಹೊಸಮನಿ, ಅಂದಪ್ಪ ಬಳೂಟಗಿ, ಕೃಷ್ಣಮೂರ್ತಿ, ಶಂಕರ ಚಾಗಿ, ಕೃಷ್ಣ ರಾಠೋಡ ಇತರರಿದ್ದರು.