

ಕೊಪ್ಪಳ: ನಿಯಮ ಮೀರಿ ಲೋಕೋಪಯೋಗಿ ಇಲಾಖೆಯಿಂದ ಪ್ಯಾಕೇಜ್ ಟೆಂಡರ್ ಕರೆದಿದ್ದಾರೆ. ತಕ್ಷಣ ಪ್ರಕ್ರಿಯೆ ರದ್ದುಪಡಿಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂ(ಪಜಾ,ಪಪಂ) ಪದಾಧಿಕಾರಿಗಳು ಗುರುವಾರ ನಗರದ ಪಿಡಬ್ಲೂಡಿ ಕಚೇರಿ ಎದುರು ಧರಣಿ ನಡೆಸಿದರು.
ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, 2ಎ, ಪ್ರವರ್ಗ&1ರ ಗುತ್ತಿಗೆದಾರರಿಗೆ ಜಾತಿವಾರು ಅನುಗುಣವಾಗಿ ಮೀಸಲಾತಿ ನೀಡಿದೆ. ಅದಕ್ಕೆ ನಿಯಮಾವಳಿ ರಚಿಸಿ ಜಾರಿ ಮಾಡಿದೆ. ಆದರೆ, ಕೊಪ್ಪಳದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಉದ್ದೇಶಪೂರ್ವಕವಾಗಿ ನಮಗೆಲ್ಲ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ನಿಯಮಾನುಸಾರ ಪಜಾ, ಪಪಂ ಗುತ್ತಿಗೆದಾರರಿಗೆ ಶೇ.24.10ರಷ್ಟು ಟೆಂಡರ್ ನೀಡಬೇಕು. ಅದನ್ನು ಪಾಲಿಸುತ್ತಿಲ್ಲ. ಕೆಟಿಪಿಪಿ ಕಾಯ್ದೆ ಉಲ್ಲಂನೆ ಮಾಡಿದ್ದಾರೆ. ಈಗಾಗಲೇ ಪ್ಯಾಕೇಜ್ ಟೆಂಡರ್ ಕರೆದಿದ್ದಾರೆ. ತಕ್ಷಣ ಅದನ್ನು ರದ್ದು ಮಾಡಬೇಕು. ನಿಯಮದಂತೆ ನಮಗೆ ಕಾಮಗಾರಿ ಟೆಂಡರ್ ನೀಡಬೇಕು. ತಪು$್ಪ ಮಾಡಿದ ಅಧಿಕಾರಿಗಳಿಗೆ ಶಿೆಯಾಗಬೇಕು. ಟೆಂಡರ್ ರದ್ದುಪಡಿಸುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಹಾಕಿದರು. ಹಲಗೆ ಬಾರಿಸಿ ಆಕ್ರೋಶ ಹೊರಹಾಕಿದರು. ಸಂದ ಜಿಲ್ಲಾಧ್ಯಕ್ಷ ಯಂಕಣ್ಣ ಹೊಸಳ್ಳಿ, ಗೌರವ ಅಧ್ಯಕ್ಷ ನಾಗರಾಜ ನಂದಾಪುರ, ವಿಭಾಗೀಯ ಅಧ್ಯಕ್ಷ ಸಿದ್ದು ಮಣ್ಣಿನವರ, ಜಿಲ್ಲಾ ಪ್ರ.ಕಾ.ದ್ಯಾಮಣ್ಣ ಭಜಂತ್ರಿ, ಖಜಾಂಚಿ ನಿಂಗಪ್ಪ ಗದ್ದಿ, ರಾಜಣ್ಣ ನಾಯಕ, ಲಿಂಗರಾಜ ಗುಳೆ, ದುರುಗೇಶ ಮಿಯಾಪುರ, ಗಣೇಶ ಹೊರತಟ್ನಾಳ ಇತರರಿದ್ದರು.