ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸಿ

Published on

ಕೊಪ್ಪಳ: ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲು ಹಂಚಿಕೆ ಸಂಬಂಧ ಜಾತಿ ಸಮೀಕ್ಷೆ ನಡೆಸುತ್ತಿದೆ. ಮಾದಿಗರು ಹಾಗೂ ಉಪ ಪಂಗಡದವರು ಕ್ರ.ಸಂ.61ರ ಜಾತಿ ಕಲಂನಲ್ಲಿ ಬೇರೆ ಜಾತಿ ಹೆಸರು ಬರೆಸಬಾರದು. ಬದಲಿಗೆ ಮಾದಿಗ ಎಂದು ನಮೂದಿಸಬೇಕೆಂದು ಮಾದಿಗ ಮಹಾಸಭಾ ಸಂಚಾಲಕ ಮಲ್ಲಿಕಾರ್ಜುನ ಪೂಜಾರ ತಿಳಿಸಿದರು.

ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 3-4 ದಶಕಗಳಿಂದ ಒಳ ಮೀಸಲಿಗಾಗಿ ಹೋರಾಟ ನಡೆಸಿದ್ದೇವೆ. ಈಗ ಕಾಲ ಕೂಡಿಬಂದಿದೆ. ರಾಜಕೀಯ ಪಕ್ಷಗಳು ನಮ್ಮ ಹೋರಾಟಕ್ಕೆ ಮಣಿದಿವೆ. ಸುಪ್ರೀಂ ಕೋರ್ಟ್ ಸಹ ರಾಜ್ಯ ಸರ್ಕಾರ ಮೀಸಲು ಹಂಚಿಕೆ ಮಾಡುವಂತೆ ತಿಳಿಸಿದೆ. ಸದ್ಯ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಏಕ ಸದಸ್ಯ ಸಮಿತಿ ಮೂಲಕ ಸಮೀೆ ಕೈಗೊಂಡಿದೆ. ಮೇ 5ರಿಂದ ಆರಂಭವಾಗಿದೆ. ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ. ಜಾತಿ ಕಾಲಂನಲ್ಲಿ ಮಾದಿಗ ಎಂದೇ ಬರೆಸಬೇಕು. ಉಪ ಅಥವಾ ಎಕೆ, ಎಡಿ, ಎಎ ಎಂದು ಉಪನಾಮ ಬರೆಸಬಾರದು ಎಂದು ಮನವಿ ಮಾಡಿದರು.

ಸಂಚಾಲಕರಾದ ನಿಂಗಜ್ಜ ಚೌದ್ರಿ, ಹನುಮಂತಪ್ಪ ಮ್ಯಾಗಳಮನಿ, ಗಾಳೆಪ್ಪ ಹಿಟ್ನಾಳ, ನಿಂಗಜ್ಜ ಬಣಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net