ಕೊಪ್ಪಳ: ಪಜಾ ಗಣತಿ ಆರಂಭವಾಗಿದ್ದು ಮಾದಿಗ ಸಮುದಾಯ ಜನರು ಸಮೀೆ ವೇಳೆ ಯಾವುದೇ ಹಿಂಜರಿಕೆ ಇಲ್ಲದೇ ಮಾಹಿತಿ ನೀಡಿ. ಜಾತಿ ಬರೆಸುವಾಗ ಮಾದಿಗ ಎಂದು ಬರೆಸುವಂತೆ ಅಖಿಲ ಭಾರತ ಮಾದಿಗ ದಂಡೋರ ಅಧ್ಯಕ್ಷ ಬಿ.ಸುನೇನಪ್ಪ ಸ್ವಾಮಿ ಮಾದಿಗ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಹಲವು ವರ್ಷಗಳ ಹೋರಾಟ ಲವಾಗಿ ಒಳ ಮೀಸಲು ನೀಡಲು ಸರ್ಕಾರ ಮನಸ್ಸು ಮಾಡಿದೆ. ಸಮೀೆ ನಡೆಸುವವರು ಬಂದಾಗ ನಮ್ಮ ಜನರು ಸರಿಯಾದ ಮಾಹಿತಿ ನೀಡಬೇಕು. ದುಡಿಮೆ ಅರಸಿ ಬೇರೆ ಹೋಗಿದ್ದಲ್ಲಿ ಅಂಥವರನ್ನು ವಾಪಸ್ ಕರೆಸಿ. ಸಮೀೆ ಮುಗಿದ ಮೇಲೆ ವಾಪಸ್ ತೆರಳುವಂತೆ ತಿಳಿಸಿ. ಸಂಟನೆ ಪದಾಧಿಕಾರಿಗಳು ನಿಮ್ಮ ವ್ಯಾಪ್ತಿ ಸಾರ್ವಜನಿಕರಿಗೆ ಸಮೀೆ ಬಗ್ಗೆ ಅರಿವು ಮೂಡಿಸಿ. ತಪು$್ಪ ಮಾಹಿತಿ ನೀಡಬೇಡಿ. ಬಾಡಿಗೆ ಮನೆಯಲ್ಲಿ ಇದ್ದವರು ಜಾತಿ ಹೆಸರು ಹೇಳಲು ಹಿಂಜರಿಯಬೇಡಿ. ಬೇರೆ ಧರ್ಮಕ್ಕೆ ಮತಾಂತರವಾಗಿದ್ದರೂ ಮೂಲ ಜಾತಿ ಬಿಡದೆ ನಮೂದಿಸುವಂತೆ ತಿಳಿಸಿದರು.
ಸಮಿತಿ ಪದಾಧಿಕಾರಿಗಳಾದ ಹುಲುಗಪ್ಪ ಹಿರೇಮನಿ, ಚಿದಾನಂದ ಪೂಜಾರ, ಪ್ರಭುರಾಜ ಕಡೇಮನಿ, ಮುತ್ತಣ್ಣ ಅಂಬಳಿ ಇತರರಿದ್ದರು.