

ಕೊಪ್ಪಳ: ಸರ್ಕಾರ ನಮ್ಮ ಪಾಲಿನ ಮೀಸಲಾತಿ ನಮಗೆ ಕೊಡಬೇಕೆಂದು ಒತ್ತಾಯಿಸಿ ರಾಜ್ಯ ಚನ್ನದಾಸರ ಕ್ಷೇಮಾಭಿವೃದ್ಧಿ ಸಂದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
35 ವರ್ಷದಿಂದ ಸೂಕ್ಷ$್ಮ ಮತ್ತು ಅತಿ ಸೂಕ್ಷ$್ಮ ಸಮುದಾಯಗಳಿಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಇಂದಿಗೂ ನಾವು ಸ್ವಂತ ನೆಲೆ ಇಲ್ಲದೇ ಅಲೆದಾಟದಲ್ಲಿದ್ದೇವೆ. ಸರ್ಕಾರಿ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ. ಅನ್ಯರ ಪಾಲಾಗುತ್ತಿವೆ. ಹಲವು ಮನವಿ, ಹೋರಾಟ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಸೌಲಭ್ಯ ಕಲ್ಪಿಸಿದೆ. ಈ ವೇಳೆ ಸಮೀೆ ನಡೆಸಿದ ನ್ಯಾಯಾಧೀಶ ಎಚ್.ಎನ್.ನಾಗಮೋಹನ್ದಾಸ್ ಆಯೋಗ ಸೂಕ್ಷ$್ಮ ಅತಿಸೂಕ್ಷ$್ಮ ಸಮುದಾಯಗಳಿಗೆ ಶೇ.1ರಷ್ಟು ಮೀಸಲು ಕಲ್ಪಿಸುವಂತೆ ಶಿಾರಸ್ಸು ಮಾಡಿದೆ. ನಮಗೆಲ್ಲ ಖುಷಿ ಆಗಿತ್ತು. ಆದರೆ, ಸರ್ಕಾರ ಬಲಾಢ್ಯ ಜಾತಿಗಳೊಂದಿಗೆ ನಮ್ಮನ್ನು ಸೇರಿಸುವ ಮೂಲಕ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ನಾವು ಯಾರ ವಿರುದ್ಧವಾಗಿಲ್ಲ. ಆದರೆ, ನಮ್ಮ ಪಾಲಿನ ಮೀಸಲಾತಿ ನಮಗೆ ನೀಡಬೇಕು. ಬಲಾಢ್ಯರೊಂದಿಗೆ ಸೇರಿಸಬಾರದು. ಇದರಿಂದ ನಮಗೆ ಅನ್ಯಾಯ ಮುಂದುವರೆಯಲಿದೆ. ಇದನ್ನು ಸರ್ಕಾರ ಮನಗಾಣಬೇಕು. ವರದಿ ಶಿಾರಸ್ಸಿನಂತೆ ಶೇ.1ರಷ್ಟು ಮೀಸಲು ನಮಗೆ ಮರಳಿ ಕಲ್ಪಿಸಿ ಆದೇಶಿಸಬೇಕು. ನಮಗೂ ಸಾಮಾಜಿಕ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.
ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಮುದಾಯ ಪ್ರಮುಖರಾದ ಪರಸಪ್ಪ, ಮಾರೆಪ್ಪ, ರಾಜಪ್ಪ ಮಾಡದೇನಿ, ದುರುಗಪ್ಪ, ಹನುಮಂತಪ್ಪ ಕೋಟಿ, ಭೀಮಪ್ಪ ಸೇರಿ ಇತರರಿದ್ದರು.