

ಕೊಪ್ಪಳ: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಕಲ್ಪಿಸುವ ಸಂಬಂಧ ನ್ಯಾ.ನಾಗಮೋಹನ್ ದಾಸ್ ವರದಿ ಸಲ್ಲಿಸಿದ್ದಾರೆ. ಆ.19ರಂದು ನಡೆವ ಸಂಪುಟ ಸಭೆಯಲ್ಲಿ ವರದಿ ಯಥಾವತ್ ಜಾರಿಗೆ ಒತ್ತಾಯಿಸಬೇಕೆಂದು ಮಾದಿಗ ಉಪ ಜಾತಿಗಳ ಒಕ್ಕೂಟ, ಮಾದಿಗ ಮಹಾಸಭಾ ಮುಖಂಡರು ಸಚಿವ ಶಿವರಾಜ ತಂಗಡಗಿಗೆ ಆಗ್ರಹಿಸಿ ಶುಕ್ರವಾರ ಮನವಿ ಸಲ್ಲಿಸಿದರು.
ಆ.19ರಂದು ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ಸಭೆಯಲ್ಲಿ ವರದಿ ಯಥಾವತ್ ಜಾರಿ ಮಾಡುವಂತೆ ನೀವು ಒತ್ತಾಯಿಸಬೇಕು. ಒಳ ಮೀಸಲು ಪರವಾಗಿ ಮಾತನಾಡಬೇಕು. ಒಂದೊಮ್ಮೆ ಇತರ ಸಚಿವರು ವಿರೋಧಿಸಿದರೆ, ವರದಿ ಶಿಾರಸ್ಸಿನಂತೆ ಮಾದಿಗ ಸಂಬಂಧಿ ಜಾತಿಗಳಿಗೆ ಪ್ರತ್ಯೇಕವಾಗಿ ಶೇ.6ರಷ್ಟು ಮೀಸಲು ಘೋಷಿಸಬೆಕು. ಸರ್ಕಾರ ವಿಳಂಬ ಧೋರಣೆ ತಳೆಯಲು ಜಾರಿ ಮುಂದೂಡಿದರೆ, ತಮಿಳು ನಾಡು ಮಾದರಿಯಲ್ಲಿ ಮಾದಿಗ ಸಂಬಂಧಿ ಜಾತಿಗಳಿಗೆ ಶೇ.6ರಷ್ಟು ಆದ್ಯತಾ ಮೀಸಲು ಘೋಷಣೆಗೆ ಒತ್ತಾಯಿಸಬೇಕೆಂದು ಆಗ್ರಹಿಸಿದರು.
ಒಂದೊಮ್ಮೆ ವರದಿ ಜಾರಿ ಮುಂದೂಡಿದರೆ ಸರ್ಕಾರವೇ ತಪು$್ಪ ಸಂದೇಶ ನೀಡಿದಂತಾಗಲಿದೆ. ವಿವಿಧ ಹುದ್ದೆಗಳ ನೇಮಕಾತಿ ವಿಳಂಬವಾಗಲಿದೆ. ಮಾಧುಸ್ವಾಮಿ ವರದಿ, ನಾಗಮೋಹನ್ ದಾಸ್ ವರದಿಗಳನ್ನು ಜಾರಿ ಮಾಡಲಾಗದಿದ್ದರೆ, ನಮ್ಮ ಪಾಲಿನ ಶೇ.6ರಷ್ಟು ಮೀಸಲು ಘೋಷಿಸಲೇಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆಂದು ಎಚ್ಚರಿಸಿದರು.
ಪ್ರಮುಖರಾದ ಗಣೇಶ ಹೊರತಟ್ನಾಳ, ನಿಂಗಜ್ಜ ಶಹಪುರ, ಹನುಮೇಶ ಕಡೆಮನಿ, ಮಲ್ಲಿಕಾರ್ಜುನ್ ಪೂಜಾರ, ರಾಮಣ್ಣ ಚೌಡಕಿ, ಮರಿಸ್ವಾಮಿ ಮಣ್ಣಿನವರ್, ಸಿದ್ದು ಮಣ್ಣಿನವರ್, ನಿಂಗಪ್ಪ ಮೈನಳ್ಳಿ, ನಿಂಗಜ್ಜ ಬಣಕಾರ, ಯಲ್ಲಪ್ಪ ಮುದ್ಲಾಪುರ್, ಪರಶುರಾಮ್ ಕೆರೆಹಳ್ಳಿ, ಮಂಜುನಾಥ್ ಮುಸಲಾಪುರ್, ಮಹೇಶ್ ಕಂದಾರಿ, ಸ್ವಾಮಿ ಹಾಲವರ್ತಿ ಇತರರಿದ್ದರು.