ವರದಿ ಲೋಪದೋಷ ಸರಿಪಡಿಸಿ

Published on

ಕೊಪ್ಪಳ: ನ್ಯಾಯಾಧೀಶ ನಾಗಮೋಹನದಾಸ್​ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಕಲ್ಪಿಸುವ ಸಂಬಂಧ ಸಲ್ಲಿಸಿರುವ ವರದಿ ಲೋಪಗಳಿಂದ ಕೂಡಿದೆ. ಅವುಗಳನ್ನು ಸರಿಪಡಿಸಿ ಜಾರಿ ಮಾಡಬೇಕೆಂದು ಛಲವಾದಿ ಮಹಾಸಭಾ ಸಂಚಾಲಕ ಕೃಷ್ಣಾ ಇಟ್ಟಂಗಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ 101 ಉಪ ಜಾತಿಗಳಿವೆ. ಆದರೆ, ಸಮಿತಿಯಲ್ಲಿ ಸಲ್ಲಿಕೆಯಾದ ವರದಿಯಲ್ಲಿ ಎಡ ಮತ್ತು ಬಲ ಸಮುದಾಯಗಳನ್ನು ಅದಲು ಬದಲು ಮಾಡಿದ್ದಾರೆ. ಕೆಲ ಸಮುದಾಯಗಳು ಬಲಗೈಯಲ್ಲಿದ್ದರೆ, ಕೆಲವು ಎಡಗೈನಲ್ಲಿವೆ. ಸಮೀೆಗೆ ಟ್ಯಾಬ್​ ನೀಡಿಲ್ಲ. ಪಡಿತರ ಚೀಟಿ, ಆಧಾರ್​ ಕಾರ್ಡ್​ ಇಲ್ಲದವರು ಹಾಗೂ 8 ಲಕ್ಷ ಮಕ್ಕಳನ್ನು ಸಮೀೆಯಿಂದ ಕೈ ಬಿಟ್ಟಿದ್ದಾರೆ. ಮನೆ ಮನೆ ಭೇಟಿ ನೀಡಿ ಸಮೀೆ ಮಾಡಿಲ್ಲ. ಬೆಂಗಳೂರಿನಂಥ ನಗರದಲ್ಲಿ ಅನೇಕರು ಸಮೀೆಯಿಂದ ಬಿಟ್ಟು ಹೋಗಿದ್ದಾರೆ. ಸಮಿತಿ ಯಾವ ಜಾತಿ ಜನ ಎಷ್ಟಿದ್ದಾರೆಂದು ವರದಿ ನೀಡಬೇಕು. ಆದರೆ, ಇವರು ಮೀಸಲು ಪ್ರಮಾಣ ಶಿಾರಸ್ಸು ಮಾಡಿದ್ದಾರೆ. ಅದು ಸಮಿತಿ ಕೆಲಸವಲ್ಲ ಎಂದರು.

ಎಡಗೈ ಮತ್ತು ಬಲಗೈ ಇಬ್ಬರಿಗೂ ಅನ್ಯಾಯವಾಗಲಿದೆ. ಜನಸಂಖ್ಯೆಯನ್ನೂ ಕಡಿಮೆ ತೋರಿಸಿದ್ದಾರೆ. ವರದಿ ಹತ್ತಾರು ಲೋಪದಿಂದ ಕೂಡಿದೆ. ಸರ್ಕಾರ ಸಂಪುಟ ಉಪ ಸಮತಿ ರಚಿಸಿ ಲೋಪ ಸರಿಪಡಿಸಬೇಕು. ಈ ಬಗ್ಗೆ ಸಮೀೆ ನಡೆಯುವಾಗಲೇ ಛಲವಾದಿ ಮಹಾಸಭಾದಿಂದ ಆಕ್ಷೇಪಣೆ ಸಲ್ಲಿಸಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಈಗಲೂ ಇನ್ನೊಮ್ಮೆ ಆಕ್ಷೇಪಣೆ ಸಲ್ಲಿಸಲಾಗಿದೆ. ಎಲ್ಲ ಗೊಂದಲಗಳನ್ನು ತಿಳಿಗೊಳಿಸಿ ಜಾರಿ ಮಾಡಲಿ. ಅಲ್ಲಿವರೆಗೂ ಮಾಡಬಾರದು. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುವ ಭರವಸೆ ನೀಡಿದ್ದು, ಅದರ ಅಂಕಿ&ಅಂಶಗಳನ್ನು ಪಡೆದು ಜಾರಿ ಮಾಡಿದರೆ ಉತ್ತಮ. ಅನ್ಯಾಯ ಮಾಡಿದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಚಾಲಕರಾದ ಸಿದ್ದು ಮ್ಯಾಗೇರಿ, ನಾಗರಾಜ ನಂದಾಪುರ, ಕನಕಮೂರ್ತಿ ಛಲವಾದಿ, ಹುಸೇನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net