ಒಳ ಮೀಸಲು ಜಾರಿಗೆ ಆಗ್ರಹಿಸಿ ಪ್ರತಿಭಟನೆ

district koppal sc reservation advocates protest
Published on

ಕೊಪ್ಪಳ: ಸುಪ್ರೀಂ ಕೋರ್ಟ್​ ತೀರ್ಪಿನಂತೆ ರಾಜ್ಯ ಸರ್ಕಾರ ಬರುವ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿಗೆ ತರಬೇಕೆಂದು ಕೊಪ್ಪಳ ಜಿಲ್ಲಾ ಪರಿಶಿಷ್ಟ ಜಾತಿ ವಕೀಲರ ಒಳ ಮೀಸಲಾತಿ ಹೋರಾಟ ಸಮಿತಿ ಸಂಚಾಲಕರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಎರಡು ತಿಂಗಳ ಹಿಂದೆಯೇ ಒಪಳ ಮೀಸಲು ಜಾರಿ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರೀಂ ಕೋರ್ಟ್​ ತೀರ್ಪು ನೀಡಿದೆ. ಈಬಗ್ಗೆ ಸಲ್ಲಿಕೆಯಾಗಿದ್ದ ಮೇಲ್ಮನವಿಗಳಲ್ಲೆವೂ ತಿರಸತಗೊಂಡಿವೆ. ಹರಿಯಾಣ ಬಿಜೆಪಿ ಸರ್ಕಾರ ಒಳ ಮೀಸಲು ಜಾರಿ ಮಾಡಿದೆ. ತೆಲಂಗಾಣ ಸರ್ಕಾರ ಜಾರಿಗೆ ಮುಂದಾಗಿದೆ. ರಾಜ್ಯದಲ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ಒಳ ಮೀಸಲು ಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್​, ಸದ್ಯ ಜಾರಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ವಿನಾ ಕಾರಣ ಕಾಲಹರಣ ಮಾಡಬಾರದೆಂದು ಆಗ್ರಹಿಸಿದರು.

ಬರುವ ಸಂಪುಟದಲ್ಲಿ ವಿಷಯ ಮಂಡಿಸಿ ಒಪ್ಪಿಗೆ ಪಡೆಯಬೇಕು. ತಕ್ಷಣದಿಂದಲೇ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿ ಮಾಡಬೇಕು. ಇಷ್ಟು ದಿನದ ಹೋರಾಟ, ತ್ಯಾಗಕ್ಕೆ ಸರ್ಕಾರ ಬೆಲೆ ನಿಡಬೇಕು. ಮೀಸಲು ಜಾರಿಗೊಳಿಸಿದ ನಂತರವೇ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಲ್ಲಿವರೆಗೆ ಎಲ್ಲ ನೇಮಕಾತಿಗಳಿಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಮಿತಿ ಪದಾಧಿಕಾರಿಗಳಾದ ಡಿ.ಎಂ.ಪೂಜಾರ, ವೈ.ಜಯರಾಜ, ಜಿ.ಎಂ ಶಿವಪುರ, ವಿರುಪಾಕ್ಷಪ್ಪ ಕಟ್ಟಿಮನಿ, ಪ್ರಕಾಶ ಎಲ್​.ಹಾದಿಮನಿ, ಶಿವಾನಂದ ಎಸ್​.ಹೊಸಮನಿ, ಸಂತೋಷ ಸಿ.ಕವಲೂರು, ಮಾರುತಿ ಚಾಮಲಾಪುರ, ರವಿಚಂದ್ರ ಜಿ. ಕಡೆಮನಿ ಸೇರಿ ಗಂಗಾವತಿ, ಯಲಬುರ್ಗಾ, ಕುಷ್ಟಗಿ ತಾಲೂಕಿನ ವಕೀಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net