

ಕೊಪ್ಪಳ: ರಾಜ್ಯ ಸರ್ಕಾರದ ಆಡಳಿತ ಅಲ್ಪಸಂಖ್ಯಾತರು, ಬಲಗೈ ಸಮುದಾಯದ ಕಪಿಮುಷ್ಠಿಯಲ್ಲಿದೆ ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು.
ಒಳ ಮೀಸಲು ನೀಡಿದ್ದಕ್ಕೆ ವಿಜಯೋತ್ಸವ ಮಾಡಲು ಸಿದ್ಧತೆ ನಡೆದಿದೆ. ಜನಸಂಖ್ಯೆ, ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲು ಹಂಚಿಕೆ ಆಗಿಲ್ಲ. ಆದಿ ಕರ್ನಾಟಕ, ಆದಿ ಆಂಧ್ರ ಸಮಸ್ಯೆ ಪರಿಹಾರವಾಗಿಲ್ಲ. ಹೀಗಿರುವಾಗ ವಿಜಯೋತ್ಸವ ಮಾಡಬಾರದು. ಒಳ ಮೀಸಲು ವಿರೋಧಿಸಿದವರು, ಹೋರಾಟ ಮಾಡದವರು ಈಗ ಮೀಸಲು ಪಡೆದಿದ್ದಾರೆ. ನಾವು ಮೂರು ದಶಕದಿಂದ ಹೋರಾಡಿದ್ದೇವೆ. ಆಳುವ ಸರ್ಕಾರಗಳು ನಮ್ಮ ಪರವಾಗಿಲ್ಲ. ನಮ್ಮ ಸಮುದಾಯದವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದರು.
ಹಿಂದುಗಳನ್ನು ಒಡೆವ ಉದ್ದೇಶದಿಂದ ಹಿಂದುಳಿದ ವರ್ಗಗಳ ಜನಗಣತಿ ಮಾಡಲಾಗುತ್ತಿದೆ. ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಹಿಂದೂಗಳ ಎಲ್ಲ ಜಾತಿಗಳ ಮುಂದೆ ಕೆಸ್ತ ಪದ ಸೇರಿಸಲಾಗಿದೆ. ನಾವೆಲ್ಲರೂ ಒಗ್ಗಟ್ಟಾಗಬೇಕು. ನಮ್ಮ ಜಾತಿಗಳ ಮುಂದೆ ಕೆಸ್ತ ಸೇರಿಸಿ ಸಮೀೆಗೆ ಬಂದರೆ ಹಿಂದುಗಳು ತಿರಸ್ಕರಿಸಬೇಕೆಂದು ಒತ್ತಾಯಿಸಿದರು.