ಕೊಪ್ಪಳ: ನವೆಂಬರ್ನಲ್ಲಿ ಕಾಂಗ್ರೆಸ್ನಲ್ಲಿ ಯಾವ ಕ್ರಾಂತಿ ಆಗುವುದಿಲ್ಲ. ಆದರೆ, ಬಿಜೆಪಿಯಲ್ಲಿ ಆಗಬಹುದು. 75 ವರ್ಷ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಕೊಡಬಹುದೆಂದು ವಿಧಾನ ಪರಿಷತ್ ಸಚೇತಕ ಸಲೀಂ ಅಹಮದ್ ಭವಿಷ್ಯ ನುಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮದು ಶಾಂತಿ ಮಾತ್ರ. ಬಿಜೆಪಿ ಕ್ರಾಂತಿ ಆಗಬಹುದು. ಮೋದಿಗೆ 75 ವರ್ಷ ವಯಸ್ಸಾಗಿದೆ. ಸಬಕ್ ಸಾಥ್ ಸಬ್ ನಾಶ್ ಮಾಡಿದ್ದಾರೆ. ಕಪು$್ಪ ಹಣ ವಾಸಪ್ ಬರಲಿಲ್ಲ. ಯುವಕರಿಗೆ ಉದ್ಯೋಗ ಸಿಗಲಿಲ್ಲ. ರಾಮ ರಾಜ್ಯದ ಬದಲು ರಾವಣ ರಾಜ್ಯವಾಗಿದೆ. ಮತಗಳ್ಳತನದಿಂದ ಅಧಿಕಾರಕ್ಕೆ ಬಂದಿದ್ದಾರೆ. 100 ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ. ಚುನಾವಣಾ ಆಯೋಗ ದುರುಪಯೋಗಪಡಿಸಿಕೊಂಡಿದ್ದಾರೆ. ಸುಳ್ಳು ಹೇಳುವುದರಲ್ಲಿ ನರೇಂದ್ರ ಮೋದಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು ಎಂದು ವ್ಯಂಗ್ಯವಾಡಿದರು.
ಯತೀಂದ್ರ ಕಲೆಕ್ಷನ್ ಮಾಸ್ಟರ್ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಜನ ಕಪಾಳ ಮೋಕ್ಷ ಮಾಡಿ 60 ಸ್ಥಾನಕ್ಕೆ ತಂದಿದ್ದಾರೆ. 40 ಪರ್ಸೆಂಟ್ ಹೋರಾಟ ಮಾಡಿದ್ದಕ್ಕೆ ಮನೆಗೆ ಕಳಿಸಿದ್ದಾರೆ. ನಾವು ಎರಡುವರೆ ವರ್ಷ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇವೆ. ನಮ್ಮನ್ನು ಪ್ರಸ್ನಿಸುವ ನೈತಿಕತೆ ಇವರಿಗಿಲ್ಲ. ಕರೋನಾದಲ್ಲಿ ರಾಜ್ಯ ಲೂಟಿ ಹೊಡೆದರು ಎಂದು ಆರೋಪಿಸಿದರು.
ಎರಡೂವರೆ ವರ್ಷ ಬಳಿಕ ಸಂಪುಟ ವಿಸ್ತರಣೆ ಆಗಲಿದೆ. ಪಕ್ಷ ಸಂಟನೆ ದೃಷ್ಟಿಯಿಂದ ಕೆಲ ಹಿರಿಯರನ್ನು ಮೊದಲ ಅವಧಿಗೆ ಸಂಪುಟದಿಂದ ಕೈ ಬಿಡಲಾಗಿತ್ತು. ಈಗ ಅವರಿಗೆ ಅವಕಾಶ ಸಿಗಲಿದೆ. ನಾನೂ ಸಚಿವ ಸ್ಥಾನ ಆಕಾಂ. ಕಳೆದ ಬಾರಿಯೇ ಆಗಬೇಕಿತ್ತು. ಯಾಕೆ ಕೊಡಲಿಲ್ಲ ಎಂಬುದು ಗೊತ್ತಿಲ್ಲ. ಈ ಬಾರಿ ಆಗುವ ಭರವಸೆ ಇದೆ. ಸಿಎಂ ಬದಲಾವಣೆ ವಿಷಯ ಹೈಕಮಾಂಡ್ಗೆ ಬಿಟ್ಟಿದ್ದು ನಮ್ಮದು ವೈಯಕ್ತಿಕ ಹೇಳಿಕೆ ಅಷ್ಟೇ ಎಂದರು.