

ಕೊಪ್ಪಳ: ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯದಲ್ಲಿದ್ದ ಮಾನಸಿಕ ಅಸ್ವಸ್ಥ ಆಶ್ರಯ ವಂಚಿತ ಯುವತಿಯನ್ನು ಸಖಿ ಟಕ ಅಧಿಕಾರಿಗಳು ರಸಿದ್ದಾರೆ.
ಸರಸ್ವತಿ ಎಂಬ 20 ವರ್ಷದ ಯುವತಿ ಮೂರು ವರ್ಷದಿಂದ ಆಶ್ರಯ ವಂಚಿತಳಾಗಿದ್ದಾಳೆ. ಮಳೆಯಲ್ಲಿ ನೆನೆಸಿಕೊಂಡು ಚಳಿಯಲ್ಲಿ ನಡುಗುತ್ತಿದ್ದ ಯುವತಿಯನ್ನು ಜಯಶ್ರೀ ತಳವಾರ ಎಂಬುವರು ರಸಿದ್ದಾರೆ. ಈ ಬಗ್ಗೆ ಸಖಿ ಟಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆಪ್ತ ಸಮಾಲೋಚನೆ ನಡೆಸಿದಾಗ ಯುವತಿ ತನ್ನೂರು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕು. 7ನೇ ತರಗತಿ ಅಭ್ಯಾಸ ಮಾಡಿದ್ದೇನೆ. ತಂದೆ ಬಸವರಾಜ, ತಾಯಿ ಜಯಶ್ರೀ. ಅಣ್ಣ ಪ್ರಭು. ಇಬ್ಬರು ಅಕ್ಕಂದಿರು ಇದ್ದಾರೆಂದು ತಿಳಿಸಿದ್ದಾಳೆ.
ಇಂಡಿ ತಾಲೂಕಿನ ಗೋರ್ನಾಳ ಬಳಿ ಮನೆ, ಹೊಲ ಇದೆ ಎಂದು ಮಾಹಿತಿ ನೀಡಿದ್ದಾಳೆ. ಸದ್ಯ ಯುವತಿಗೆ ಸಖಿ ಟದಲ್ಲಿ ಆಶ್ರಯ ನೀಡಲಾಗಿದೆ. ಕುಟುಂಬಸ್ಥರು ಇದ್ದಲ್ಲಿ ಮಾಹಿತಿ ನೀಡಬೇಕು. ಮಾಹಿತಿಗೆ 8217646873 ಸಂಪರ್ಕಿಸಬೇಕು. ಯುವತಿ ರಕ್ಷಣೆಗೆ ಸಹಾಯ ಮಾಡಿದ ಜಯಶ್ರೀಗೆ ಸಖಿ ಟಕದಿಂದ ಪ್ರಶಂಸನಾ ಪತ್ರ ನೀಡಲಾಗಿದೆ. ಸಾರ್ವಜನಿಕರು ಇಲಾಖೆ ಕಾರ್ಯಗಳಗೆ ಸಹಕಾರ ನೀಡುವಂತೆ ಸಖಿ ಟಕ ಆಡಳಿತಾಧಿಕಾರಿ ಯಮುನಾ ಬಿ. ತಿಳಿಸಿದ್ದಾರೆ.