ರೋಟರಿ ಕ್ಲಬ್​ ಸೇವೆ ಸ್ಮರಣೀಯ

district koppal rotary club president manjunath angadi
Published on

ಕೊಪ್ಪಳ: ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಸೇವೆ ನಮ್ಮನ್ನು ಕಷ್ಟ ಕಾಲದಲ್ಲಿ ಕಾಪಾಡುತ್ತದೆ ಎಂದು ಗವಿಮಠದ ಕಿರಿಯ ಸ್ವಾಮೀಜಿ ಶ್ರೀ ವೀರೇಶ್​ ದೇವರು ಹೇಳಿದರು.

ನಗರದ ಪಾರ್ಥಹೋಟೆಲ್​ನಲ್ಲಿ ಬುಧವಾರ ನಡೆದ ರೋಟರಿ ಕ್ಲಬ್​ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಕೃತಿ ನೋಡಿ ನಾವು ಕಲಿಯಬೇಕು. ನಮಗೆ ಎಲ್ಲವನ್ನೂ ನೀಡಿದೆ. ಅದರಂತೆ ಮನುಷ್ಯನೂ ಪರೋಪಕಾರಿ ಆಗಬೇಕು ಎಂದು ಸಲಹೆ ನೀಡಿದರು.

ಪ್ರಮುಖರಾದ ತ್ರಿವಿಕ್ರಮ್​ ಜೋಶಿ ಮಾತನಾಡಿ, ರೋಟರಿ ಕ್ಲಬ್​ ಇಡೀ ವಿಶ್ವದಲ್ಲಿ ಪೋಲಿಯೋ ನಿಮೂರ್ಲನೆಗೆ ಶ್ರಮಿಸಿದೆ. ಸದ್ಯ ಕ್ಯಾನ್ಸರ್​ ನಿಮೂರ್ಲನೆ ಯೋಜನೆ ಕೈಗೆತ್ತಿಕೊಳ್ಳುವ ಯೋಚನೆ ಇದೆ. ದೇಶದಲ್ಲಿ ವರ್ಷಕ್ಕೆ 20 ಲಕ್ಷ ಕಂಪ್ಯೂಟರ್​ ಪಿಯು ಮಕ್ಕಳಿಗೆ ಉಚಿತವಾಗಿ ನೀಡುವ ಉದ್ದೇಶ ಹೊಂದಿದೆ ಎಂದರು.

ನೂತನ ಅಧ್ಯಕ್ಷ ಮಂಜುನಾಥ ಅಂಗಡಿ ಮಾತನಾಡಿ, ರೋಟರಿ ಕ್ಲಬ್​ ಅಧ್ಯಕ್ಷನಾಗುವ ಅವಕಾಶ ದೊರೆತಿದೆ. ಸದಸ್ಯರ ಸಲಹೆ, ಸಹಕಾರ ಪಡೆದು ಅಭಿವೃದ್ಧಿಗೆ ಶ್ರಮಿಸುವೆ. ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವೆ ಎಂದು ತಿಳಿಸಿದರು.

ಕಿಲೋರ್ಸ್ಕರ್​ ಕಾರ್ಖಾನೆ ಎಂಡಿ ಆರ್​.ವಿ.ಗುಮಾಸ್ತೆ ಮಾತನಾಡಿ, ಸೇವೆಯಲ್ಲಿ ತೊಡಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಕೊಟ್ಟಷ್ಟು ನಮ್ಮ ಸಂಪತ್ತು ವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕ್ಲಬ್​ ಕಾರ್ಯದಶಿ ಚಂದ್ರಶೇಖರಯ್ಯ ಸೊಪ್ಪಿಮಠ, ನಿಕಟಪೂರ್ವ ಅಧ್ಯಕ್ಷ ಬೊಮ್ಮಣ್ಣ ಅಕ್ಕಸಾಲಿ, ಪ್ರಮುಖರಾದ ಡಾ. ಕೆ.ಜಿ.ಕುಲಕರ್ಣಿ, ರಾಜೇಶ್​ ಕೋರಿಶೆಟ್ಟರ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net