

ಕೊಪ್ಪಳ: ರಸ್ತೆ ಸುರಕ್ಷತೆಗೆ ಕೈಗೊಂಡ ರ್ನಿಣಯಗಳನ್ನು ಸಂಬಂಧಿಸಿದ ಅಧಿಕಾರಿಗಳು ಪಾಲಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಹೊರಡಿಸಿದೆ. ಸಂಬಂಧಿಸಿದ ಅಧಿಕಾರಿಗಳು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ನ್ಯಾಯಾಂಗ ಆದೇಶ ಉಲ್ಲಂನೆಯಾಗಲಿದೆ. ಅಧಿಕಾರಿಗಳು ಈ ಬಗ್ಗೆ ಎಚ್ಚರವಹಿಸಿ. ರಸ್ತೆಗಳಲ್ಲಿ ಬ್ಲಾ$್ಯಕ್ ಸ್ಪಾಟ್ಗಳನ್ನು ಸರಿಪಡಿಸಿ. ವಿದ್ಯುತ್, ಸಿಸಿಟಿವಿ ಕ್ಯಾಮೆರಾ, ಸೈನೇಜ್ ಅಗತ್ಯ ಇರುವಲ್ಲಿ ಅಳವಡಿಸಿ. ನಿಯಮಿತವಾಗಿ ಸಮಿತಿ ಸಭೆ ನಡೆಸಿ. ಸುರಾ ಚಿಹ್ನೆಗಳನ್ನು ಅಳವಡಿಸಿ.
ಜನರಿಗೆ ಅರಿವು ಮೂಡಿಸಿ. ಅತಿ ಭಾರದ ವಾಹನಗಳ ಓಡಾಟದಿಂದ ರಸ್ತೆ ಹಾಳಾಗುತ್ತದೆ. ಮರಳು ಟಿಪ್ಪರ್ಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ನಗರದಲ್ಲಿ ುಟ್ಪಾತ್ ತೆರವು ಮಾಡಿ. ವ್ಯಾಪಾರಿಗಳಿಗೆ ಜಾಗ ಗುರುತಿಸಿ ನೀಡಿ. ವೇಗದ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ಪ್ರಕರಣ ದಾಖಲಿಸಲು ತಾಕೀತು ಮಾಡಿದರು.
ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಮಾತನಾಡಿ, ಟೋಲ್ಗಳಲ್ಲಿ ಬೈಕ್ ಓಡಾಡುವ ರಸ್ತೆ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ರಸ್ತೆಗಳಲ್ಲಿ ಎಷ್ಟು ಗುಂಡಿಗಳಿವೆ ? ಸುಮ್ಮನೆ ಸಭೆಗೆ ಬರಬಾರದು. ನಿಖರ ಮಾಹಿತಿಯೊಂದಿಗೆ ಸಭೆಗೆ ಆಗಮಿಸಿ. ಮುನಿರಾಬಾದ್ ಗ್ರಾಮದೊಳಗೆ ಬಸ್ ಹೋಗುತ್ತಿಲ್ಲ ಯಾಕೆ ? ಚಾಲಕರಿಗೆ ಸೂಚಿಸಿ. ಮಾತು ಕೇಳದಿದ್ದರೆ ಕ್ರಮ ಜರುಗಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಸುರಕ್ಷತಾ ಮಾಸಾಚರಣೆ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪಿಡಬ್ಲೂಡಿ ಇಇ ಪಿ.ಹೇಮಂತರಾಜ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸಪೇಟೆ ಸೈಟ್ ಇಂಜಿನಿಯರ್ ದಾನೇಶ್ವರ್, ಆರ್ಟಿಒ ಲಕ್ಷಿ$್ಮಕಾಂತ ನಾಲವಾರ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್, ಕೆಕೆಆರ್ಟಿಸಿ ಡಿಸಿ ರಾಜೇಂದ್ರ ಜಾಧವ್ ಇತರರಿದ್ದರು.