

ಕೊಪ್ಪಳ: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿ ಮನೆಗೆ ವಾಪಸ್ಸಾದ ಯೋಧನಿಗೆ ಶನಿವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ತಾಲೂಕಿನ ಗುಡಿಗೇರಿ ಗ್ರಾಮದ ನಿವಾಸಿಯಾಗಿರುವ ಶೇಖಪ್ಪ ಹರಿಜನ 22 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯಾಗಿದ್ದು, ಶನಿವಾರ ಕೊಪ್ಪಳಕ್ಕೆ ಆಗಮಿಸಿದರು. ಈ ವೇಳೆ ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ರೈಲ್ವೆ ನಿಲ್ದಾಣದಲ್ಲೇ ಹೂ ಮಳೆಗೆರೆದು ಭವ್ಯ ಸ್ವಾಗತ ಕೋರಿದರು. ಭಾರತಾಂಬೆ ಸೇವೆ ಮಾಡಿ ಬಂದ ಸೈನಿಕನಿಗೆ ಮನವಿ ಸಲ್ಲಿಸಿದರು. ರೈಲ್ವೆ ನಿಲ್ದಾಣದಿಂದ ಗವಿಮಠದವರೆಗೆ ಮೆರವಣಿಗೆ ಮಾಡಿದರು. ಪುಷ್ಪ ಅರ್ಪಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.