ಒಳ ಮೀಸಲು ಜಾರಿ ವಿಳಂಬ ಸಲ್ಲ : ಗಣೇಶ ಹೊರತಟ್ನಾಳ

GANESH HORATATNALA
Published on

ಕೊಪ್ಪಳ: ಒಳ ಮೀಸಲು ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟಡಿಸಿದೆ. ಇಷ್ಟಿದ್ದರೂ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಅನಗತ್ಯವಾಗಿ ಆಯೋಗ ರಚಿಸಿದೆ ಎಂದು ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯ ಗಣೇಶ ಹೊರತಟ್ನಾಳ್​ ಕಿಡಿಕಾರಿದರು.

ಹಲವು ದಶಕಗಳ ಹೋರಾಟ ಲವಾಗಿ ನ್ಯಾಯಾಲಯ ಒಳ ಮೀಸಲಾತಿಗೆ ಸಮ್ಮತಿಸಿದೆ. ಹರಿಯಾಣ ರಾಜ್ಯ ಜಾರಿ ಮಾಡಿದೆ. ಬೇರೆ ರಾಜ್ಯಗಳು ಮಾಡುವ ಭರವಸೆ ನೀಡಿವೆ. ರಾಜ್ಯದಲ್ಲಿ ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸುಖಾ ಸುಮ್ಮನೆ ವಿಳಂಬ ಮಾಡುತ್ತಿದ್ದಾರೆ. ಪಜಾಯ ಸ್ಪ-----ೃಶ್ಯರ ಮಾತಿಗೆ ಕಟಿಬಿದ್ದು ಅನ್ಯಾಯ ಮಾಡುತ್ತಿದ್ದಾರೆ. ಇದೀಗ ಯಾರೂ ಕೇಳದೆ ಆಯೋಗ ರಚಿಸಿದ್ದು ಯಾವ ಪುರುಶಾರ್ಥಕ್ಕೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪಜಾಯ 101ಒಳಪಂಡಗಡಗಳಲ್ಲಿ ಮಾದಿಗರ ಸಂಖ್ಯೆ ಹೆಚ್ಚಿದೆ. ಆಯೋಗ ರಚನೆ ಹೆಸರಿನಲ್ಲಿ ಮಾದಿಗರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಹೊಸ ಆಯೋಗ ರಚಿಸುವ ಹಿಂದೆ ಪರಿಶಿಷ್ಟ ಜಾತಿಯ ಕೆಲ ಒಳಪಂಗಡ ನಾಯಕರ ದೊಡ್ಡ ಹುನ್ನಾರವಿದೆ. ಕಾಲಹರಣ ಮಾಡಿ, ಮೂಲ ದಲಿತರನ್ನು ವಂಚಿಸುವ ಕುತಂತ್ರ ನಡೆಯುತ್ತಿದೆ. ಆಯೋಗ ರಚಿಸುವ ನಾಟಕ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರಾದ ನಾಗಲಿಂಗ ಮಾಳೆಕೊಪ್ಪ, ಮಂಜುನಾಥ ಮುಸಲಾಪುರ, ಮರಿಸ್ವಾಮಿ ಬೇವೂರು, ಸುಭಾಷ ಕನಕಗಿರಿ, ದೇವರಾಜ ಹುಣಸಿಹಾಳ, ವಿನಾಯಕ ಕಿಡದಾಳ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net