

ಕೊಪ್ಪಳ: ಉಜಿರೆಯಲ್ಲಿ ಸುದ್ದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸುದ್ದಿಗೆ ತೆರಳಿದ ಖಾಸಗಿ ವಾಹಿನಿ ವರದಿಗಾರ ಹಾಗೂ ವಿಡಿಯೋ ರ್ಜನಲಿಸ್ಟ್ ಮೇಲೆ ಹಲ್ಲೆ ಮಾಡಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಬೆದರಿಕೆ ಹಾಕಿದ್ದಾರೆ. ಪತ್ರಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದ್ದು, ಮುಕ್ತವಾಗಿ ಕೆಲಸ ಮಾಡಲು ಸಮಸ್ಯೆಆಗುತ್ತಿದೆ ಎಂದು ಆರೋಪಿಸಿದರು.
ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಿ ಕ್ರಮ ಜರುಗಿಸಬೇಕು. ಪತ್ರಕರ್ತರ ಹಿತರಕ್ಷಣಾ ಕಾಯ್ದೆ ಜಾರಿ ಮಾಡಿ ಸೂಕ್ತ ರಕ್ಷಣೆ ಒದಗಿಸಬೇಕು. ರಾಜ್ಯದಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ದೇವಪ್ಪ ನಾಗನೂರು, ದೊಡ್ಡೇಶ ಎಲಿಗಾರ, ಹುಸೇನ್ ಪಾಷಾ, ಬಸವರಾಜ ಕರುಗಲ್, ಪ್ರಮೋದ ಜಿ.ಕೆ., ದತ್ತು ಕಮ್ಮಾರ, ಅನಿಲ ಬಾಚನಳ್ಳಿ, ಶ್ರೀಕಾಂತ ಅಕ್ಕಿ, ವಿಠ್ಠಲ ಧುತ್ತರಗಿ, ಮಲ್ಲು ಪರೂತಿ, ವಿಡಿಯೋ ರ್ಜನಲಿಸ್ಟ್ಗಳಾದ ನಾಭಿರಾಜ ದಸ್ತೆನವರ, ಮಾರುತಿ ಕಟ್ಟಿಮನಿ, ರವಿ ಪಟವಾರಿ ಇದ್ದರು.