ಮಾನವೀಯತೆ ಸಂದೇಶ ನೀಡಿದ ರೇಣುಕಾಚಾರ್ಯ

1203-Kpl-Ravi-3
Published on

ಕೊಪ್ಪಳ: ಜಗತ್ತಿಗೆ ಮಾನವೀಯತೆ ಸಂದೇಶ ನೀಡಿದವರು ವೀರಶೈವ ಧರ್ಮದ ಮಹಾನ್ ಶರಣ ಜಗದ್ಗುರು ರೇಣುಕಾಚಾರ್ಯರು ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.

ನಗರದ ರೇಣುಕಾಚಾರ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವೆಲ್ಲರೂ ಭಾರತೀಯರು. ಯಾವುದೇ ಜಾತಿ ಭೇದವಿಲ್ಲದೇ ಎಲ್ಲರನ್ನು ಪ್ರೀತಿಸಬೇಕು. ಮಹನಿಯರ ತತ್ವಾದರ್ಶ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಬೇಕು. ಸಮಾಜದಲ್ಲಿ ಗಂಡು&ಹೆಣ್ಣಿಗೆ ಸಮಾನ ಸ್ಥಾನ ನೀಡಬೇಕು. ಮಕ್ಕಳಿಗೆ ಸರಿಯಾದ ಸಂಸ್ಕಾರ ಹೇಳಿಕೊಡಬೇಕು. ತಾಯಿಯಾಗುವ ಪ್ರತಿಯೊಬ್ಬ ಹೆಣ್ಣು ಪ್ರಸವಪೂರ್ವ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಮಗುವಿನ ಮೇಲೆ ಉತ್ತಮ ಸಂಸ್ಕಾರದ ಪ್ರಭಾವ ಉಂಟಾಗುತ್ತದೆ ಎಂದು ಹೇಳಿದರು.

ಶಿಕ್ಷಕ ಶರಣಯ್ಯ ಅಬ್ಬಿಗೆರಿಮಠ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶ್ರೀ ರೇಣುಕಾಚಾರ್ಯರ ಬಗ್ಗೆ ಮಾಹಿತಿ ಹುಡುಕುತ್ತ ಹೋದರೆ, ಆಂಧ್ರಪ್ರದೇಶದ ಕದ್ರಿಗಿಯಲ್ಲಿ ಜನಿಸಿದರು ಎಂದು ತಿಳಿಯುತ್ತದೆ. ಅವರು ಭೂ ಲೋಕದಲ್ಲಿ ಅಧರ್ಮ, ಅಶಾಂತಿ ಸ್ಥಾಪನೆಯಾದಾಗ ಅದನ್ನು ಹೋಗಲಾಡಿಸಿ ಸಧರ್ಮವನ್ನ ಹುಟ್ಟುಹಾಕಲು ಜನಿಸಿದ ಮಹಾನ್ ಶರಣ. ಶೈವ ಸಮುದಾಯದ ಶ್ರೇಷ್ಠತೆ ಮೇಲ್ಮಟ್ಟಕ್ಕೆ ತರಲು ಶ್ರಮಿಸಿದರು ಎಂದರು.

ಹೆಬ್ಬಾಳದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ, ಮೈನಳ್ಳಿ-&ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿ ಮತ್ತು ಕಂಪಸಾಗರದ ನಾಗಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಗವಿಮಠದಿಂದ ಭವನವರಗೆ ಶ್ರೀ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನಗರಸಭೆ ಉಪಾಧ್ಯೆ ಅಶ್ವಿನಿ ಗದುಗಿನಮಠ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಪ್ರಮುಖರಾದ ಹಂಪಯ್ಯ ಬನ್ನಿಮಠ, ಗುರುಮೂರ್ತಿಸ್ವಾಮಿ, ಗವಿಸಿದ್ದಯ್ಯ ಎಸ್. ಲಿಂಗಬಸಯ್ಯನ ಮಠ, ಕೋಟ್ರಬಸಯ್ಯ, ಕಲ್ಲಯ್ಯಜ್ಜ ಕಲ್ಯಾಣಗೌಡ್ರು, ಶಿವಕುಮಾರ್ ಹಿರೇಮಠ, ಸಿದ್ದಲಿಂಗಯ್ಯ ಹಿರೇಮಠ, ದಯಾನಂದ ಸಿ.ಎಸ್., ಬಾಲಚಂದ್ರಯ್ಯ ಬಿ.ಎಂ., ವಿರೇಶ ಮಹಾಂತಯ್ಯನಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net