ಜೋಳ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಲು ಮನವಿ

Published on

ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ಬಿಳಿ ಜೋಳ, ಭತ್ತ ಖರೀದಿಗೆ ರೈತರು ನೋಂದಣಿ ಮಾಡಿಕೊಳ್ಳುವಂತೆ ಆಹಾರ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಸಾಮಾನ್ಯ ಭತ್ತಕ್ಕೆ 2300ರೂ., ಗ್ರೇಡ್​ ಎ ಭತ್ತಕ್ಕೆ 2320ರೂ., ಹೈಬ್ರಿಡ್​ ಜೋಳಕ್ಕೆ 3371 ರೂ., ಮಾಲ್ದಂಡಿ ಜೋಳಕ್ಕೆ 3421ರೂ. ನಿಗದಿಪಡಿಸಲಾಗಿದೆ. ಡಿ.1ರಿಂದ ೆಬ್ರವರಿ 28ವರೆಗೆ ನೋಂದಣಿ ಮಾಡಿಕೊಳ್ಳಬಹುದು. ಕೊಪ್ಪಳದಲ್ಲಿ ಭತ್ತ, ಜೋಳ ಖರೀದಿ ಕೇಂದ್ರ, ಗಂಗಾವತಿ, ಕಾರಟಗಿಯಲ್ಲಿ ಭತ್ತ ಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net