ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
2024-&25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಪ್ರತಿ ಕ್ವಿಂಟಾಲ್ಗೆ 7550 ರೂ., ಎಕರೆಗೆ 4 ಕ್ವಿಂಟಾಲ್ನಂತೆ ಒಬ್ಬ ರೈತರಿಂದ ಗರಿಷ್ಠ 40 ಕ್ವಿಂಟಾಲ್ ಖರೀದಿಸಲಾಗುವುದು. ಕೊಪ್ಪಳ ತಾಲೂಕಿನ ಹಿರೇಸಿಂಧೋಗಿ, ಕನಕಗಿರಿ ತಾಲೂಕಿನ ನವಲಿ, ಕನಕಗಿರಿ, ಕುಷ್ಟಗಿ ನಗರ ಹಾಗೂ ತಾಲೂಕಿನ ಹನುಮಸಾಗರ, ತಾವರಗೇರಾ, ಹಿರೇನಂದಿಹಾಳ, ಹಾಗೂ ಕುಕನೂರಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ನೋಡಲ್ ಅಧಿಕಾರಿಗಳ ವಿವರ
ಹಿರೇಸಿಂಧೋಗಿ ಖರೀದಿ ಕೇಂದ್ರಕ್ಕೆ ವಿ.ಬಸವರಾಜ ಮೊ.ಸಂ: 9448765143, ನವಲಿ ಹಾಗೂ ಕನಕಗಿರಿ ಕೇಂದ್ರಕ್ಕೆ ಹರೀಶ ಪತ್ತಾರ ಮೊ.ಸಂ: 9060893320, ಕುಷ್ಟಗಿ, ಹನುಮಸಾಗರ, ತಾವರಗೇರಾ, ಹಿರೇನಂದಿಹಾಳ ಖರೀದಿ ಕೇಂದ್ರಕ್ಕೆ ಸುರೇಶ ಬಿ.ತಂಗನೂರು ಮೊ.ಸಂ: 9880886909, ಕುಕನೂರು ಖರೀದಿ ಕೇಂದ್ರಕ್ಕೆ ಗುರುಪ್ರಸಾದ್ ಗುಡಿ ಮೊ.ಸಂ: 9972054874 ನೋಡಲ್ ಅಧಿಕಾರಿಗಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕೊಪ್ಪಳ ದೂ.ಸಂ: 08539-230040, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಜಿಲ್ಲಾ ಟಾಸ್ಕ್ೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿತಿಳಿಸಿದೆ.