ಕೊಪ್ಪಳ: ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರ ಆರಂಭಿಸಿದ್ದು, ರೈತರಿಗೆ ಜಾಗೃತಿ ಮೂಡಿಸಲು ರಚಿಸಿದ ಪೋಸ್ಟರ್ಗಳನ್ನು ಡಿಸಿ ನಲಿನ್ ಅತುಲ್ ಶುಕ್ರವಾರ ಬಿಡುಗಡೆಗೊಳಿಸಿದರು.
ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಕೊಪ್ಪಳ, ಬೆಳಗಾವಿ, ಚಿತ್ರದುರ್ಗ, ಚಿಕ್ಕಬಳ್ಳಾಪೂರ ಹಾಗೂ ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೇಂದ್ರ ತೆರೆಯಲಾಗಿದೆ. ಪ್ರತಿ ಕ್ವಿಂಟಾಲ್ 8,000ನಿಗದಿಪಡಿಸಲಾಗಿದೆ. ರೈತರು ಕೇಂದ್ರಗಳ ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿ ಎಕರೆಗೆ 4 ಕ್ವಿಂಟಾಲ್ನಂತೆ ಗರಿಷ್ಠ 40 ಕ್ವಿಂಟಾಲ್ವರೆಗೆ ಪ್ರತಿ ರೈತರಿಂದ ಖರೀದಿಸಲಾಗುವುದು. ರೈತರು ಹತ್ತಿರದ ಪಿಎಸಿಎಸ್, ಎಫ್.ಪಿ.ಓ., ಟಿ.ಎ.ಪಿ.ಎಂ.ಸಿ.ಗಳಲ್ಲಿ ತಮ್ಮ ಫೂಟ್ಸ್ ಎಫ್ಐಡಿ. ಸಂಖ್ಯೆ ನೀಡಿ ನೋಂದಣಿ ಮಾಡಿಕೊಂಡು ತೊಗರಿ ಮಾರಾಟ ಮಾಡಬಹುದು.
ಮಾಹಿತಿಗೆ ಉಚಿತ ದೂರವಾಣಿ ಸಂಖ್ಯೆ: 1800 4251552 ಸಂಪರ್ಕಿಸಬಹುದು ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು. ಜಂಟಿ ಕೃಷಿ ನಿದೇಶಕ ರುದ್ರೇಶಪ್ಪ ಟಿ.ಎಸ್., ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ ಇತರರಿದ್ದರು.