ರೆಡ್​ಕ್ರಾಸ್​ ಸೇರಿ ದೇಶ ಸೇವೆ ಮಾಡಿ

Published on

ಕೊಪ್ಪಳ: ರೆಡ್​ಕ್ರಾಸ್​ ಸಂಸ್ಥೆ ಸೇರುವ ಮೂಲಕ ಯುವಕರು ದೇಶ ಸೇವೆಯಲ್ಲಿ ತೊಡಗಿಕೊಳ್ಳಬಹುದು ಎಂದು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಬಸವರಾಜ ಎಂ.ಎಸ್​. ತಿಳಿಸಿದರು.

ನಗರದ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೆಡ್​ ಕ್ರಾಸ್​ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

1863ರಲ್ಲಿ ಅಂತಾರಾಷ್ಟ್ರೀಯ ರೆಡ್​ ಕ್ರಾಸ್​ ಸಂಸ್ಥೆ ಜಿನೇವಾದಲ್ಲಿ ಸ್ಥಾಪನೆಯಾಗಿದೆ. 1920ರಲ್ಲಿ ಭಾರತದಲ್ಲಿ 1921ರಲ್ಲಿ ರಾಜ್ಯದಲ್ಲಿ ಸ್ಥಾಪನೆ ಆಗಿದೆ. ಈ ಸಂಸ್ಥೆಯು ಮುಖ್ಯವಾಗಿ 7 ಮೂಲಭೂತ ಅಂಶಗಳನ್ನು ಒಳಗೊಂಡಿದೆ. ಪ್ರತಿ ವರ್ಷ ಮೇ 8ರಂದು ಹೆನ್ರಿ ಡ್ಯೂನೆಂಟ್​ ಅವರ ಜನ್ಮ ದಿನವನ್ನು ವಿಶ್ವ ರೆಡ್​ಕ್ರಾಸ್​ ದಿನವಾಗಿ ಆಚರಿಸಲಾಗುತ್ತಿದೆ ಎಂದರು.

ಪ್ರಾಚಾಯೆರ್ ಉಮಾದೇವಿ ಹಿರೇಮಠ ಮಾತನಾಡಿ, ಯಾವುದೇ ಪ್ರದೇಶದಲ್ಲಿ ಭೂಕಂಪ, ನೈಸರ್ಗಿಕ ವಿಪತ್ತು ಅಥವಾ ಮಾನವ ನಿರ್ಮಿತ ವಿಪತ್ತು ಉದ್ಭವಿಸಿದರೆ ರೆಡ್​ಕ್ರಾಸ್​ ಅಲ್ಲಿ ಸೇವೆ ಸಲ್ಲಿಸುತ್ತದೆ. ಕೊಪ್ಪಳ ರೆಡ್​ಕ್ರಾಸ್​ ಸಂಸ್ಥೆಯೂ ಅನೇಕ ಸೇವೆ ಸಲ್ಲಿಸಿದೆ ಎಂದರು.

ಕೊಪ್ಪಳ ರೆಡ್​ಕ್ರಾಸ್​ ಸಂಸ್ಥೆ ಸಭಾಪತಿ ಸೋಮರಡ್ಡಿ ಅಳವಂಡಿ, ಉಪನ್ಯಾಸಕರಾದ ಯು.ಎಸ್​. ಸೊಪ್ಪಿಮಠ, ಜ್ಯೋತಿ ರೊಟ್ಟಿ, ಶರಣಬಸಪ್ಪ ಪಾಟೀಲ, ಸುಧಾ, ಸೌಮ್ಯ ನಾಲ್ವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net