ಅಭಿಮಾನಿಗಳಿಂದ ರಾಜ್​ ದಿನಾಚರಣೆ

district koppal rd.rajkumar birthday celebration fans
Published on

ಕೊಪ್ಪಳ: ನಗರದ ಅಶೋಕ ವೃತ್ತ ಬಳಿ ಇರುವ ಡಾ.ರಾಜ್​ಕುಮಾರ್​ ನಾಮಲಕ ಬಳಿ ಅಭಿಮಾನಿಗಳು ಗುರುವಾರ ಕೇಕ್​ ಕತ್ತರಿಸಿ ರಾಜ್​ ಜನ್ಮ ದಿನ ಆಚರಿಸಿದರು.

ಶಿವಪ್ಪ ಹಡಪದ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ, ಸಾಹಿತಿ ಡಾ. ಮಹಾಂತೇಶ ಕೊತಬಾಳ, ಹೋರಾಟಗಾರರಾದ ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ ಕೇಕ್​ ಕತ್ತರಿಸಿದರು.

ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಡಾ.ರಾಜ್​ ಕುಮಾರ್​ ಸರಳತೆ, ಸೌಜನ್ಯದಿಂದ ಜನರ ಮನ ಗೆದ್ದವರು. ಚಿತ್ರರಂಗ ಉಳಿವಿಗೆ ಶ್ರಮಿಸಿದರು. ಕುವೆಂಪು ಹಾಗೂ ರಾಜ್​ಕುಮಾರ್​ಜ್ಞಾನ, ಕ್ರಿಯೆ, ನಡೆ ನುಡಿ ಮೂಲಕ ಕನ್ನಡ ನಾಡಿಗೆ ಆದರ್ಶದ ದೀಕ್ಷೆ ನೀಡಿದವರು ಎಂದರು.

ಮಹಾಂತೇಶ ಕೊತಬಾಳ, ಲಿಂಗರಾಜ ನವಲಿ, ರಾಜಶೇಖರ ಏಳುಬಾವಿ, ಶಿವರಡ್ಡಿ ಬಾಣದ, ಪ್ರಧಾನ ಅಂಚೆ ಕಚೇರಿ ಪಾಲಕ ನಾಗರಾಜ.ಬಿ, ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ, ಸಕ್ರಪ್ಪ ಹೂಗಾರ, ಸವೋತ್ತಮ ಉಪಾಧ್ಯಾಯ, ಸಾಹಿತಿ ಡಿ.ಎಂ.ಬಡಿಗೇರ, ಮಾಲಾ ಬಡಿಗೇರ, ಸಂಜಯದಾಸ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net