ಕೊಪ್ಪಳದಲ್ಲಿ‌ ಅತ್ಯಾಚಾರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

jail conviction rapist 20years dj koppal
ಸಾಂದರ್ಭಿಕ ಚಿತ್ರ
Published on

ಕೊಪ್ಪಳ: ಅಪ್ರಾಪ್ತಳನ್ನು ಅಪಹರಿಸಿ ಅತ್ಯಾಚಾರ ಎಸಗಿದ ಸಂಗಾಪುರದ ಪ್ರವಿಣಕುಮಾರ ಭೋವಿ ಎಂಬಾತನ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಯೆಂದು ಪರಿಗಣಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ಮತ್ತು ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ) ನ್ಯಾಯಾಧೀಶ ಕುಮಾರ ಡಿ.ಕೆ 20 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರವಿಣ ಕುಮಾರ್​ 2020ರಲ್ಲಿ ಬಾಲಕಿಯನ್ನು ಪ್ರೀತಸುವುದಾಗಿ ನಂಬಿಸಿ ಅಪಹರಿಸಿಕೊಂಡು ವಿಜಯಪುರಕ್ಕೆ ತೆರಳಿ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಸಿಪಿಐಗಳಾದ ಸುರೇಶ ತಳವಾರ ಹಾಗೂ ಉದಯರವಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಸೆರೆವಾಸ ಹಾಗೂ 25ಸಾವಿರ ರೂ.ದಂಡ ವಿಧಿಸಿದೆ. ಇದರಲ್ಲಿ 10 ಸಾವಿರ ರೂ. ಬಾಧಿತಳಿಗೆ ಪರಿಹಾರವಾಗಿ ನೀಡುವಂತೆ ಸೂಚಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net