ಅತ್ಯಾಚಾರಿಗೆ 20 ವರ್ಷ ಸಜೆ

Published on

ಕೊಪ್ಪಳ: ಅಪ್ರಾಪ್ತಳನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಶಾಂತೇಶ ಕುಮಾರ ಚಲವಾದಿ ಎಂಬ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಹಾಗೈ ಸತ್ರ ನ್ಯಾಯಾಧೀಶ ಹಾಗೂ ತ್ವರಿತ ವಿಲೇವಾರಿ (ಪೋಕ್ಸೋ) ನ್ಯಾಯಾಲಯ 20 ವರ್ಷ ಜೈಲು ಶಿೆ ಹಾಗೂ 31 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಕುಕನೂರು ತಾಲೂಕಿನ ಗ್ರಾಮವೊಂದರಲ್ಲಿ ಪಾರಿವಾಳ ಹಾರಿಸಲು ಬಂದ ಬಾಲಕಿಯನ್ನು ಶಾಂತೇಶ ಮದುವೆಯಾಗುವುದಾಗಿ ನಂಬಿಸಿದ್ದ. 2022ರ ಜೂನ್​ 24ರಂದು ಅಪಹರಿಸಿಕೊಂಡು ಗಂಗಾವತಿಗೆ ಕರೆದೊಯ್ದಿದ್ದ. ಗೌಸಿಯಾ ಬೇಗಂ ಎಂಬುವರ ಮನೆ ಬಾಡಿಗೆ ಪಡೆದು ಅಕ್ರಮ ಬಂಧನದಲ್ಲಿರಿಸಿದ್ದ. ರಾತ್ರಿ ಅತ್ಯಾಚಾರ ಎಸಗಿದ್ದ. 2022ರ ಜುಲೈ 8ರಂದು ಬೆಂಗಳೂರಿನ ಅಡಿಗೇರ ಹಳ್ಳಿ ಲೇಔಟ್​ನಲ್ಲಿ ವಾಸವಿದ್ದ. ತಾವಿಬ್ಬರು ಗಂಡ&ಹೆಂಡತಿ ಎಂದು ಹೇಳಿಕೊಂಡಿದ್ದ. 79 ದಿನಗಳವರೆಗೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಕುಕನೂರು ಠಾಣೆಯಲ್ಲಿ ಪಿಎಸ್​ಐ ಡಾಕೇಶ ದೂರು ದಾಖಲಿಸಿದ್ದರು.

ಯಲಬುರ್ಗಾ ಸಿಪಿಐ ಆಗಿದ್ದ ವೀರಾರೆಡ್ಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕುಮಾರ ಡಿ.ಕೆ. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಾಂತೇಶಕುಮಾರ ಚಲವಾದಿಯನ್ನು ಅಪರಾಧಿಯೆಂದು ಘೋಷಿಸಿದರು. 20 ವರ್ಷ ಜೈಲು ಶಿೆ ಹಾಗೂ 31 ಸಾವಿರ ರೂ. ದಂಡ ವಿಧಿಸಿ ಡಿ.7ರಂದು ಆದೇಶಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು. ಪೊಲೀಸ್​ ಅಧಿಕಾರಿ ಅರ್ಜುನ ನ್ಯಾಯಾಲಯಕ್ಕೆ ಸಾಗಳನ್ನು ಹಾಜರುಪಡಿಸಿ ಸಹಕರಿಸಿದ್ದಾರೆಂದು ಅಭಿಯೋಜಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net