ಕೊಪ್ಪಳದಾದ್ಯಂತ ಸಂಭ್ರಮದ ರಂಜಾನ್​ ಆಚರಣೆ

ramzan festival celebrating in koppal people representatives participated
ರಂಜಾನ್​ ಅಂಗವಾಗಿ ಕೊಪ್ಪಳದಲ್ಲಿ ಗುರುವಾರ ಮುಸ್ಲಿಮ್​ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Published on

ಕೊಪ್ಪಳ: ನಗರ ಸೇರಿ ತಾಲೂಕಿನ ವಿವಿಧೆಡೆ ಗುರುವಾರ ರಂಜಾನ್​ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರದ ಈದ್ಗಾ ಮೈದಾನ, ಹುಲಿಕೆರೆ, ಭಾಗ್ಯನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಬೆಳಗ್ಗೆಯೇ ಸಾಮೂಹಿಕ ಪ್ರಾರ್ಥನೆಗಳು ನಡೆದವು. ಬಿಸಿಲಿನ ತಾಪ ಹೆಚ್ಚಿರುವ ಕಾರಣ ಕೆಲವರು ಪ್ರಾರ್ಥನೆ ವೇಳೆ ಕೊಡೆ ಹಿಡಿದು ಕುಳಿತಿದ್ದು ಕಂಡುಬಂತು. ಚಿಣ್ಣರು ಸೇರಿ ಎಲ್ಲ ವಯೋಮಾನದ ಪುರುಷರು ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನ ಭರ್ತಿಯಾದ ಕಾರಣ ಕೆಲವರು ರಸ್ತೆಯಲ್ಲಿ ಕುಳಿತು ದೇವರಿಗೆ ನಮಿಸಿದರು.

ನಗರಾಡಳಿತದಿಂದ ಪ್ರಾರ್ಥನೆ ಸಲ್ಲಿಕೆಗೆ ಶುಚಿಯಾಗಲು ನೀರು ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಪ್ರಾರ್ಥನೆ ಮುಗಿದ ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಚುನಾವಣೆ ನೀತಿ ಸಂಹಿತೆ ಹಾಗೂ ಹಬ್ಬ ಹಿನ್ನೆಲೆ ಅಗತ್ಯ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಯಿತು.

ಮುಸ್ಲಿಮ್​ ಸಮುದಾಯದ ನಾಯಕರು ಪ್ರಾರ್ಥನೆಗೆ ಆಗಮಿಸಿದ ಗಣ್ಯರನ್ನು ಸನ್ಮಾನಿಸಿದರು. ಶಾಸಕ ರಾವೇಂದ್ರ ಹಿಟ್ನಾಳ, ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್​, ಬಿಜೆಪಿ ಮುಖಂಡ ಅಮರೇಶ ಕರಡಿ, ಪ್ರಮುಖರಾದ ಡಾ.ಮಹೇಶ ಗೋವನಕೊಪ್ಪ, ಅಮ್ಜದ್​ ಪಟೇಲ್​, ಎಂ.ಕಾಟನ್​ ಪಾಷಾ ಇತರರು ಪರಸ್ಪರ ಶುಭಾಶಯ ಕೋರಿದರು. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net