

ಕೊಪ್ಪಳ: ನಗರ ಸೇರಿ ತಾಲೂಕಿನಾದ್ಯಂತ ಮಂಗಳವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಹಳ್ಳಗಳು ತುಂಬಿ ಹರಿದಿವೆ.
ಕಳೆದೊಂದು ವಾರ ಕಣ್ಮರೆಯಾಗಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದಾನೆ. ಕೊಪ್ಪಳದಲ್ಲಿ ಅಷ್ಟಾಗಿ ವರುಣ ಅಬ್ಬರಿಸಿಲ್ಲ. ಆದರೆ, ಗ್ರಾಮೀಣ ಭಾಗಗಳಲ್ಲಿ ಆರ್ಭಟಿಸಿದ್ದಾನೆ. ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಹಳ್ಳ ದಾಟುವಾಗ 10ಕ್ಕೂ ಹೆಚ್ಚು ಕುರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ತಕ್ಷಣವೇ ಸ್ಥಳದಲ್ಲಿದ್ದ ಕುರಿಗಾರರು ಹಳ್ಳಕ್ಕಿಳಿದು ರಕ್ಷಣೆ ಮಾಡಿದ್ದಾರೆ. ಯಾವುದೇ ಅವಡ ಸಂಭವಿಸಿಲ್ಲ. ಹೊಲಗಳಲ್ಲಿ ನೀರು ಸಂಗ್ರಹವಾಗಿದ್ದು, ಅರ್ಧ ಬೆಳೆ ಮುಳುಗಿವೆ.