ಸೇತುವೆ ಕಾಮಗಾರಿ ಪೂರ್ಣಗೊಳಿಸಿ

district koppal railway gate issue rob mp rajashekhar hitnal protest
Published on

ಕೊಪ್ಪಳ: ನಗರದ ಸ್ವಾಮಿ ವಿವೇಕಾನಂದ ಶಾಲೆ ಹತ್ತಿರದ ರೈಲ್ವೆ ಗೇಟ್​ 63ರ ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ನಿವಾಸಿಗಳು ಸಂಸದ ರಾಜಶೇಖರ ನಿವಾಸ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

2017ರಲ್ಲೇ ಕೆಳ ಸೇತುವೆ ಮಂಜೂರಾಗಿದೆ. ಬಲೀಕ ಕೋವಿಡ್​ ಹೆಸರಿನಲ್ಲಿ ಕಾಮಗಾರಿ ಮುಂದೂಡಲಾಯಿತು. ಕಳೆದ ವರ್ಷ ರೈಲು ಸಂಚಾರ ತಡೆದು ಹಳಿ ಕೆಳಗೆ ಬ್ಲಾಕ್​ ಅಳವಡಿಸಲಾಗಿದೆ. ಆದರೆ, ಎರಡೂ ಬದಿ ರಸ್ತೆ ನಿರ್ಮಿಸಿಲ್ಲ. ಇದರಿಂದ ಸಂಚಾರ ಸಾಧ್ಯವಾಗುತ್ತಿಲ್ಲ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ನಿತ್ಯ ಕೆಲಸ ಹಾಗೂ ಶಾಲೆಗೆ ತೆರಳಲು ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದೇವೆಂದು ಅಳಲು ತೋಡಿಕೊಂಡರು.

ಎರಡೂ ಬದಿ ರಸ್ತೆ, ಚರಂಡಿ ನಿರ್ಮಿಸಬೇಕು. ಸ್ವಾಧಿನವಾದ ಭೂಮಿಗೆ ಪರಿಹಾರ ನೀಡಬೇಕು. ಪರಿಹಾರ ನೀಡುವಂತೆ ಅನೇಕ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಸೇತುವೆಯಿಂದ ಕಲ್ಯಾಣನಗರ, ಚನ್ನಬಸವನಗರ, ಮಹಾಲಕ್ಷಿ$್ಮ ಬಡಾವಣೆ, ಗಣೇಶ ನಗರ, ವಿಜಯನಗರ ಹಾಗೂ ಇನ್ನಿತರ ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮನವಿ ಪಡೆದ ಸಂಸದ ರಾಜಶೇಖರ ಹಿಟ್ನಾಳ ಆದಷ್ಟು ಬೇಗ ಕಾಮಗಾರಿ ಮುಗಿಸುವ ಭರವಸೆ ನೀಡಿದರು. ಹೋರಾಟಗಾರರಾದ ಬಸವರಾಜ ಶೀಲವಂತರ, ಅಲ್ಲಮಪ್ರಭು ಬೆಟ್ಟದೂರು, ಎಸ್​.ಜಿ.ಹೊಸಭಾವಿ, ಬಸವರಾಜ ನಾಯಕ, ದುರುಗೇಶಪ್ಪ, ರವಿ, ಗೀತಾ ಪಾಟೀಲ, ರೋಷನ್​ ಅಲಿ, ಗಾಳೆಪ್ಪ ಮುಂಗೋಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net