ರಘುವೀರ ತೀರ್ಥರ ಆರಾಧನ ಮಹೋತ್ಸವ

district koppal raghuveer teetrha aradhana mahotsava
Published on

ಕೊಪ್ಪಳ: ನಗರದ ರಾವೇಂದ್ರ ಸ್ವಾಮಿ ಮಠದಲ್ಲಿ ಲಕ್ಷ ತುಳಸಿ ಅರ್ಚನೆ ಹಾಗೂ ಶ್ರೀ ರಘುವೀರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು.

ಬೆಳಗ್ಗೆ 5 ಗಂಟೆಗೆ ಸುಪ್ರಭಾತ ಸೇವೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಮಹಿಳೆಯರು ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡಿದರು. ಗ್ರಾಮ ಪ್ರದಕ್ಷಿಣೆ ಹಮ್ಮಿಕೊಳ್ಳಲಾಯಿತು. ಬಳಿಕ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಸಾಂಗವಾಗಿ ನೇರವೇರಿತು. ತೀರ್ಥ, ಪ್ರಸಾದ ಸೇವೆ ಜರುಗಿತು.

ಸಂಜೆ ಬೆಂಗಳೂರಿನ ಪಂಡಿತ ಅಂಬರೀಷಾಚಾರ್​ ಅವರು ಪ್ರವಚನ ನಡೆಸಿಕೊಟ್ಟರು. ಕಲಬುರಗಿ ರಮೇಶ ಕುಲಕರ್ಣಿ ನಡೆಸಿಕೊಟ್ಟ ಭಕ್ತಿ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು. ನಂತರ ದೀಪೋತ್ಸವ ಹಾಗೂ ಫಲಮಂತ್ರಾಕ್ಷತೆ ಕಾರ್ಯಕ್ರಮದೊಂದಗೆ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.

ರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಅರ್ಚಕ ರಘುಪ್ರೇಮಾಚಾರ್​ ಮುಳುಗುಂದ, ಪ್ರಮೋದಾಚಾರ ಪೂಜಾರ, ಶ್ರೀನಿವಾಸಾಚಾರ ಮುತುಗಿ, ವ್ಯವಸ್ಥಾಕ ಜಗನ್ನಾಥ ಹುನುಗುಂದ, ಕೃಷ್ಣಾ ಸೊರಟೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net