ಚನ್ನಮ್ಮ ಜಯಂತಿಗೆ ಸಿದ್ಧತೆ ಮಾಡಿ, ಎಡಿಸಿ ಸಿದ್ರಾಮೇಶ್ವರ ಸೂಚನೆ

district koppal queen channamma jayanthi adc sidrameshwara
Published on

ಕೊಪ್ಪಳ: ಜಿಲ್ಲಾಡಳಿತದಿಂದ ಅ.23ರ ಬದಲು ನ.3ರಂದು ಜಿಲ್ಲಾ ಕೇಂದ್ರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮುದಾಯ ಮುಖಂಡರ ಕೋರಿಕೆ ಮೇರೆಗೆ ಅ.23ರ ಬದಲು, ನ.3ರಂದು ಜಯಂತಿ ಆಚರಿಸಲಾಗುವುದು. ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಗಣ್ಯರನ್ನ ಆಹ್ವಾನಿಸಿ. ಎಲ್ಲ ಇಲಾಖೆಯವರು ನಿಮ್ಮ ಜವಾಬ್ದಾರಿ ನಿಭಾಯಿಸಿ. ಮೆರವಣಿಗೆ ಸಾಗುವ ಮಾರ್ಗದಲ್ಲಿ ಶುಚಿತ್ವ ಕಾಪಾಡಿ. ವೇದಿಕೆ ಕಾರ್ಯಕ್ರಮದಲ್ಲಿ ಸ್ವಚ್ಛತೆ, ಕುಡಿವ ನೀರು ವ್ಯವಸ್ಥೆ ಮಾಡಿ. ಸರ್ಕಾರಿ ಶಾಲಾ&ಕಾಲೇಜು, ಕಚೇರಿಗಳಲ್ಲಿ ಅ.23ರಂದು ಕಡ್ಡಾಯವಾಗಿ ಜಯಂತಿ ಆಚರಿಸಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಮಾತನಾಡಿ, ನ.3ರಂದು ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆ ಚನ್ನಮ್ಮ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್​ ಸರ್ಕಲ್​, ಶಾರದಾ ಟಾಕೀಸ್​, ಗಡಿಯಾರ ಕಂಬ ಮಾರ್ಗವಾಗಿ ಸಾಹಿತ್ಯಭವನದವರೆಗೆ ನಡೆಯಲಿದೆ. ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಪ್ರೌಢಶಾಲಾ ಮಕ್ಕಳಿಗೆ ಕಿತ್ತೂರು ರಾಣಿ ಚನ್ನಮ್ಮ ಕುರಿತು ಪ್ರಬಂಧ ಏರ್ಪಡಿಸಿ, ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಡಿಡಿಪಿಯು ಜಗದೀಶ, ಅಂಬೇಡ್ಕರ್​ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ, ಆರೋಗ್ಯ ಇಲಾಖೆ ಶಿವಾನಂದ ಪುಜಾರ, ಪಂಚಮಸಾಲಿ ಸಮುದಾಯ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ತಾಲೂಕು ಅಧ್ಯಕ್ಷ ಕರಿಯಪ್ಪ ಮೇಟಿ, ಮುಖಂಡರಾದ ದೇವರಾಜ ಹಾಲಸಮುದ್ರ, ಮಲ್ಲಿಕಾರ್ಜುನ ಸೀಳಿನ್​, ಶರಣಪ್ಪ ಶೀಲವಂತರ, ಮಾರ್ಕಂಡಪ್ಪ ಅಜಗಾರ, ಉಮೇಶ್​ ಎತ್ತಿನಮನಿ, ರೇಖಾ ಸಂಗಲ್​, ನಿರ್ಮಲಾ ಲಿಂಗಣ್ಣನವರ, ಶಿವಲೀಲಾ ಎಲ್​. ಪಾಟೀಲ, ಸುಮಂಗಲಾ ಹಂಚಿನಾಳ, ಗೀತಾ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net