ರಸ್ತೆ ಸಂಚಾರ ಸಮೀೆ 17ಕ್ಕೆ

Published on

ಕೊಪ್ಪಳ: ಲೋಕೋಪಯೋಗಿ ಇಲಾಖೆ ಜಿಲ್ಲೆಯಲ್ಲಿ ಫೆ.17 ರಿಂದ 24ವರೆಗೆ ರಸ್ತೆ ಸಂಚಾರ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಫೆ. 17ರ ಬೆಳಗ್ಗೆ 6 ರಿಂದ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಸಮೀಕ್ಷೆ ಕೇಂದ್ರಗಳಲ್ಲಿ ಕೈಗೊಳ್ಳಲಾಗುವುದು. ರಸ್ತೆಗಳ ಮೇಲೆ ಕ್ಯಾಮೆರಾ ಆಧಾರಿತ ಕೇಂದ್ರಗಳನ್ನು ಸ್ಥಾಪಸಿಲಾಗಿದೆ. ಚಾಲಕರು ನಿಧಾನವಾಗಿ ವಾಹನ ಚಲಾಯಿಸಿಕೊಂಡು ಹೋಗುವ ಮೂಲಕ ಸಹಕರಿಸಲು ಬಳ್ಳಾರಿ ವೃತ್ತ ಸಿಇ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net