ನರೇಗಾ ಕೂಲಿ ಕೆಲಸ ಹೆಚ್ಚಿಸಲು ಪ್ರತಿಭಟನೆ

protest nrega work koppal cpims workers
ಕೊಪ್ಪಳದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂದ ಜಿಲ್ಲಾ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು. ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸಕೆರಾ, ಸಂಚಾಲಕರಾದ ಬಸವರಾಜ್​ ಮರಕುಂಬಿ, ಸುಂಕಪ್ಪ ಗದಗ, ಹುಸೇನಪ್ಪ ಕೆ., ಮರಿ ನಾಗಪ್ಪ, ಎಚ್​.ಗಂಗಾಧರಯ್ಯ ಸ್ವಾಮಿ, ರೇಣುಕಮ್ಮ ಭೀಮನೂರು ಇದ್ದರು.
Published on

ಕೊಪ್ಪಳ: ಬರಗಾಲ ಇದ್ದು, ನರೇಗಾದಡಿ 150 ದಿನಗಳಿಗೆ ಕೂಲಿ ಕೆಲಸ ಹೆಚ್ಚಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಬರಗಾಲ ಆವರಿಸಿದೆ. 223ಕ್ಕೂ ಹೆಚ್ಚು ತಾಲೂಕು ಬರ ಪೀಡಿತವಾಗಿವೆ. ಬೆಳೆನಷ್ಟವಾಗಿದೆ. ಕೇಂದ್ರಕ್ಕೆ 18 ಸಾವಿರ ಕೋಟಿ ರೂ. ಪರಿಹಾರ ಕೋರಲಾಗಿದೆ. ಜಾನುವಾರುಗಳಿಗೆ ಕುಡಿವ ನೀರು, ಮೇವಿನ ಕೊರತೆ ಆಗಿದೆ. ಜನರಿಗೂ ಕುಡಿವ ನೀರು, ಉದ್ಯೋಗ ಸಮಸ್ಯೆ ಕಾಡುತ್ತಿದೆ. ಗ್ರಾಮೀಣ ಭಾಗದ ಜನರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಆದರೂ ಸರ್ಕಾರ ಬರ ಪರಿಹಾರ ಕಾಮಗಾರಿಗಳಿಗೆ ವೇಗ ನೀಡುತ್ತಿಲ್ಲವೆಂದು ಆರೋಪಿಸಿದರು.

ನರೇಗಾದಡಿ 150 ದಿನಗಳಿಗೆ ಕೂಲಿ ಕೆಲಸ ಹೆಚ್ಚಳ ಮಾಡಬೇಕು. ಕೂಲಿ ಮೊತ್ತ 600ರೂ.ಗೆ ಹೆಚ್ಚಿಸಿ. ಕೂಲಿಕಾರರ ಸಾಲ ಮನ್ನಾ ಮಾಡಬೇಕು. ಬರಗಾಲ ಪರಿಹಾರ ಕಾಮಗಾರಿ ತೀವ್ರವಾಗಿ ಜಾರಿಗೊಳಿಸಬೇಕು. ಕಿರು ಸಾಲ ಸಂಸ್ಥೆಗಳಿಂದ ಪಡೆದ ಸಾಲ ವಸೂಲಿ ಮಾಡದಂತೆ ಸೂಚನೆ ನೀಡಬೇಕು. ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕು. ಕೊಪ್ಪಳದಲ್ಲಿ 25 ಸಾವಿರ ಕುಟುಂಬಗಳು ಗೃಹ ಲಕ್ಷಿ$್ಮಯಿಂದ ವಂಚಿತವಾಗಿದ್ದು, ಅವರಿಗೂ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂದ ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸಕೆರಾ, ಸಂಚಾಲಕರಾದ ಬಸವರಾಜ್​ ಮರಕುಂಬಿ, ಸುಂಕಪ್ಪ ಗದಗ, ಹುಸೇನಪ್ಪ ಕೆ., ಮರಿ ನಾಗಪ್ಪ, ಎಚ್​.ಗಂಗಾಧರಯ್ಯ ಸ್ವಾಮಿ, ರೇಣುಕಮ್ಮ ಭೀಮನೂರು, ರಮೇಶ್​ ಬಡಿಗೇರ, ದುರುಗೇಶ ಮರಕುಂಬಿ, ಬಸವರಾಜ ಮೇಳೆ, ಅಡಿವೆಪ್ಪ ಕುಷ್ಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net