ರಮೇಶ ಕತ್ತಿ ವಿರುದ್ಧ ಆಗಲಿ ಕ್ರಮ

IMG-20251024-WA0025
Published on

ಕೊಪ್ಪಳ: ವಾಲ್ಮೀಕಿ ಸಮುದಾಯವನ್ನು ನಿಂದಿಸಿದ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ಮಹಾಸಭಾದಿಂದ ಗುರುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಮುದಾಯ ಮುಖಂಡ ಟಿ.ರತ್ನಾಕರ ಮಾತನಾಡಿ, ರಾಜ್ಯದ ಬಹುದೊಡ್ಡ ಸಮುದಾಯವನ್ನು ರಮೇಶ ಕತ್ತಿ ನಿಂದಿಸುವ ಮೂಲಕ ದೊಡ್ಡ ತಪ್ಪು ಮಾಡಿದ್ದಾರೆ. ಸದಾ ಹೋರಾಟದ ಬದುಕು ಸಾಗಿಸುವ ಶಾಂತಿ ಸೌಹಾರ್ದಕ್ಕೆ ಹೆಸರಾಗಿರುವ ವಾಲ್ಮೀಕಿ ಸಮುದಾಯವನ್ನು ಅನಗತ್ಯವಾಗಿ ಕೆಣಕಿದ್ದಾರೆ. ಈ ಮೂಲಕ ರಾಜ್ಯದಲ್ಲಿ ದಂಗೆ ಏಳುವಂತೆ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಕೂಡಲೇ ಸರ್ಕಾರ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.

ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ್, ಧರ್ಮದರ್ಶಿ ರಾಮಣ್ಣ ಕಲ್ಲನವರ, ಪ್ರಮುಖರಾದ ಮಂಜುನಾಥ ಗೊಂಡಬಾಳ, ಬಸವರಾಜ ಶಹಪೂರ, ಹನುಮೇಶ ನಾಯಕ, ರಾಮಣ್ಣ ಚೌಡಕಿ, ಶಿವಮೂರ್ತಿ ಗುತ್ತೂರ, ಕೊಟೇಶ ದದೇಗಲ್, ಜ್ಯೋತಿ ಗೊಂಡಬಾಳ, ರಾಮಣ್ಣ ಬೆಳವಿನಾಳ, ಶಾಂತಪ್ಪ ಬೆಳವಿನಾಳ, ಭೀಮಣ್ಣ ಹವಳೆ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net