

ಕೊಪ್ಪಳ: ಚಿತ್ರದುರ್ಗದ ರೇಣುಕಾ ಸ್ವಾಮಿ ಹಂತಕರಿಗೆ ಕಠಿಣ ಶಿೆ ವಿಧಿಸಬೇಕು. ಸರ್ಕಾರ ಪ್ರಭಾವಿಗಳಿಗೆ ಮಣಿಯದೇ ಸಾಮಾನ್ಯರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂದ ಪದಾಧಿಕಾರಿಗಳು ಮಂಗಳವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಯಾವುದೋ ನೆಪ ನೀಡಿ ಸಾಮಾನ್ಯ ವ್ಯಕ್ತಿಯಾದ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಟ ದರ್ಶನ, ನಟಿ ಪವಿತ್ರಗೌಡ ಹಾಗೂ ಅವರ ಸಹಚಚರು ಕೃತ್ಯ ಎಸಗಿರುವುದು ಘೋರ ಕೆಲಸ. ಕುಟುಂಬಕ್ಕೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಅಮಾನವೀಯವಾಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ಒಪು$್ಪವುದಿಲ್ಲ. ಆತ ತಪು$್ಪ ಮಾಡಿದ್ದಲ್ಲಿ ಕಾನೂನು ರೀತಿಯಲ್ಲಿ ಶಿಸಬೇಕಿತ್ತು. ಆದರೆ ಹೀನಾಯವಾಗಿ ಸಾಯಿಸಿದನ್ನು ಜಂಗಮ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಲೆ ಮಾಡಿದವರಿಗೆ ಕಠಿಣ ಶಿೆಯಾಗಬೇಕು. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಬಾರದು. ರೇಣುಕಾಸ್ವಾಮಿ ಕುಟುಂಬಕ್ಕೆ ನೆರವಾಗಬೇಕು. ಜಂಗಮ ಸಮಾಜವು ಅವರ ಕುಟುಂಬದೊಂದಿಗಿರಲಿದೆ. ಪ್ರಭಾವಿಗಳೆಂಬ ಕಾರಣಕ್ಕೆ ಅವರನ್ನು ಕೈ ಬಿಡಬಾರದು. ಮೃತನ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಂಗಮ ಸಮುದಾಯದ ಪ್ರಮುಖರಾದ ವಿ.ಎಂ.ಭೂಸನೂರಮಠ, ಬಸಯ್ಯ ಹಿರೇಮಠ, ನೀಲಕಂಠಯ್ಯ ಹಿರೇಮಠ, ಬಸಯ್ಯ, ಹಂಪಯ್ಯ, ನಾಗಭೂಷಣ ಸಾಲಿಮಠ, ಸದಾಶಿವಯ್ಯ, ಅಜ್ಯಯ್ಯ, ಶರಣಯ್ಯ ಟೈಲರ್, ನಾಗಬಸಯ್ಯ, ಕೊಟ್ರಬಸಯ್ಯ, ಶಾಂತಕ್ಕ, ಪಾರ್ವತಿ, ಸವಿತಾ, ಸುಷ್ಮಾ, ಲಲಿತಾ ಇತರರಿದ್ದರು.