ಸಂಸದ ಅನಂತ ಕುಮಾರ್ ಹೆಗಡೆ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

District Koppal protest in koppal aginest Mp Ananta kumar hegde cm siddaramayya issue
protest in koppal aginest Mp Ananta kumar hegde cm siddaramayya issue
ಸಂಸದ ಅನಂತ ಕುಮಾರ್​ ಹೆಗಡೆ ಬಂಧನಕ್ಕೆ ಆಗ್ರಹಿಸಿ ಪ್ರಗತಿಪರ ಸಂಟನೆಗಳ ಮುಖಂಡರು ಕೊಪ್ಪಳದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮುಖಂಡರಾದ ಅಲ್ಲಮ ಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಮಹಾಂತೇಶ ಕೊತಬಾಳ, ಕಾಶಪ್ಪ ಚಲವಾದಿ, ನಿಂಗಪ್ಪ ಹರಿಜನ, ದುರಗಪ್ಪ, ಖಾಸಿಂ ಸರ್ದಾರ ಇದ್ದರು.
Published on

ಕೊಪ್ಪಳ: ಸಿಎಂ ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲಿ ಮಾತನಾಡಿರುವ ಸಂಸದ ಅನಂತ ಕುಮಾರ್​ ಹೆಗಡೆ ಬಂಧಿಸಿ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಪ್ರಗತಿಪರ ಸಂಟನೆಗಳ ಮುಖಂಡರು ಮಂಗಳವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಹಿಂದೆ ಸಂಸದ ಅನಂತ ಕುಮಾರ್​ ಕುಕನೂರಿಗೆ ಆಗಮಿಸಿದ್ದಾಗ ಸಂವಿಧಾನ ಸುಡುವ ಮಾತನಾಡಿ ಶಾಂತಿ ಕದಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಏಕ ವಚನದಲ್ಲಿ ಹಿಯಾಳಿಸುವ ಮೂಲಕ ತನ್ನ ನಾಲಿಗೆ ಹರಿ ಬಿಟ್ಟಿದ್ದಾನೆ. ನಿರಂತರ ಸಮಾಜದಲ್ಲಿ ಗೊಂದಲದ ಹೇಳಿಕೆ ನೀಡುವ ಮೂಲಕ ಶಾಂತಿಗೆ ಧಕ್ಕೆ ತುರುವ ಕೆಲಸ ಮಾಡುತ್ತಿದ್ದಾನೆ.

ಕೋಮು ಪ್ರಚೋದನೆ ಹೇಳಿಕೆ ನೀಡಿ ರಾಜ್ಯದಲ್ಲಿ ಅರಾಜಕತೆ, ಅಶಾಂತಿ ಸೃಷ್ಟಿಗೆ ಕಾರಣವಾಗುತ್ತಿದ್ದಾನೆ. ಇದೀಗ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಾಚ್ಯವಾಗಿ ನಿಂದಿಸಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಅನಂತ ಕುಮಾರ್​ ೋಟೋ ಸುಟ್ಟು ಖಂಡನೆ ವ್ಯಕ್ತಪಡಿಸಿದರು.

ಹೆಗಡೆ ನಿರಂತರ ಸಮಾಜ ಕದಡುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಆತನನ್ನು ಬಂಧಿಸಬೇಕು. ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ರಾಜ್ಯದಿಂದ ಗಡಿಪಾರು ಮಾಡಬೇಕು. ಒಬ್ಬ ಮುಖ್ಯಮಂತ್ರಿಗೆ ಈ ರೀತಿ ಮಾತನಾಡಿದರೆ ಸಾಮಾನ್ಯ ಜನರ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ. ನಿರಂತರ ಸಮಾಜದಲ್ಲಿ ಅಶಾಂತಿ ಸೃಷ್ಟಿಸು ಹೇಳಿಕೆ ನೀಡುವ ಅನಂತ ಕುಮಾರ್​ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಪ್ರಗತಿಪರ ಸಂಟನೆಗಳ ಮುಖಂಡರಾದ ಅಲ್ಲಮ ಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಮಹಾಂತೇಶ ಕೊತಬಾಳ, ಕಾಶಪ್ಪ ಚಲವಾದಿ, ನಿಂಗಪ್ಪ ಹರಿಜನ, ದುರಗಪ್ಪ, ಖಾಸಿಂ ಸರ್ದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net