

ಕೊಪ್ಪಳ: ಕೇಂದ್ರ ಸರ್ಕಾರ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ವಿಧ್ಯಾರ್ಥಿ,ಯುವಜನ ಮತ್ತು ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜೆಸಿಟಿಯು ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕೇಂದ್ರ ಸರ್ಕಾರ ಡಾ. ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆ ಕಾನೂನು ರಚಿಸುವುದು, ವಾರ್ಷಿಕ ಎರಡು ಕೋಟಿ ರೂ. ಉದ್ಯೋಗ ಸೃಷ್ಟಿಸುವುದು, ಎಲ್ಲರ ವಿಕಾಸ ಮಾಡುವ ಭರವಸೆ ನೀಡಿ ಹುಸಿ ಮಾಡಿದೆ. ಕೆಲವೇ ರ್ಪೊರೇಟ್ ಮನೆತನಗಳ ಪರವಾಗಿ ನೀತಿಗಳನ್ನು ಜಾರಿ ಮಾಡುತ್ತಿದೆ. ದೆಹಲಿಯ ಗಡಿಯಲ್ಲಿ ನ್ಯಾಯಕ್ಕಾಗಿ ಹೋರಾಡುವ ರೈತರ ಮೇಲೆ ದೌರ್ಜನ್ಯ ನಡಸುತ್ತಿದೆ. ಇದನ್ನು ಸಹಿಸಲಾಗದು ಎಂದು ಖಂಡಿಸಿದರು.
ಕಾರ್ಮಿಕ ಮುಖಂಡ ಕಾಸಿಂ ಸರ್ದಾರ, ಬಸವರಾಜ ಶೀಲವಂತರ, ಡಿ.ಎಚ್.ಪೂಜಾರ ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಎರಿಕೆ ನಿಯಂತ್ರಿಸಿ. ಸಾರ್ವಜನಿಕ ಆಸ್ತಿಗಳ ಖಾಸಗೀಕರಣ ಕೈ ಬಿಡಬೇಕು. ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಕನಿಷ್ಠ ಬೆಂಬಬ ಬೆಲೆ ಕಾನೂನು ರಚಿಸಬೇಕು. ನರೇಗಾ ಕೆಲಸ 200 ದಿನಗಳವರೆಗೆ ಹೆಚ್ಚಿಸಬೇಕು. ಕೂಲಿ ಮೊತ್ತ 600 ಪಾವತಿಸಬೇಕು. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ಬಿಡುಗಡೆಗೊಳಿಸಿ. ಆಹಾರ,ಆರೋಗ್ಯ,ಶಿಕ್ಷಣ, ಯೋಜಯ ಹಕ್ಕುಗಳು ಸಾರ್ವತ್ರಿಕರಣಗೊಳಿಸಬೇಕೆಂದು ಒತ್ತಾಯಿಸಿದರು.
ಹೋರಾಟಗಾರರಾದ ಶರಣು ಗಡ್ಡಿ, ಜಿ.ನಾಗರಾಜ, ಮಹಾಂತೇಶ್ ಕೊತ್ಬಾಳ್, ಕೆ.ಬಿ.ಗೋನಾಳ್, ಹನುಮಂತಪ್ಪ ಹುಲಿ ಹೈದರ, ಕಾಶಪ್ಪ ಚಲವಾದಿ, ಹನುಮೇಶ್ ಕಲ್ಮಂಗಿ, ಶಿವಪ್ಪ ಹಡಪದ, ಬಸರಾಜ ನರೇಗಲ್, ದುರುಗೇಶ ಕೆ.ವಿ.ಎಸ್., ರಾಮಲಿಂಗ ಶಾಸ್ತ್ರಿ, ಗೌಸ್ಸಾಬ್ ನದಾಫ್, ಎಸ್. ಎ.ಗಫಾರ್, ಸುಂಕಪ್ಪ ಗದಗ ಇತರರಿದ್ದರು.