ಅಣು ಸ್ಥಾವರಕ್ಕೆ ಜಾಗ ಹುಡುಕಾಟ

district koppal power plant dc naleen athul
Published on

ಕೊಪ್ಪಳ: ಕೇಂದ್ರ ಸರ್ಕಾರ ಉತ್ತರ ಕರ್ನಾಟಕದಲ್ಲಿ ಮತ್ತೊಂದು ಅಣು ವಿದ್ಯುತ್​ ಸ್ಥಾವರ ನಿರ್ಮಾಣಕ್ಕೆ ಯೋಜಿಸಿದೆ. ಅದರ ಭಾಗವಾಗಿ ನಾಲ್ಕೆ$ದು ಜಿಲ್ಲೆಗಳಲ್ಲಿ ಒಂದೇ ಭಾಗದಲ್ಲಿ 1200 ಎಕರೆಯಷ್ಟು ಜಾಗ ಹುಡುಕಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಜಿಲ್ಲೆಯಲ್ಲೂ ಒಂದೇ ಕಡೆ ಅಷ್ಟೊಂದು ಭೂಮಿ ಹುಡುಕಾಟಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಸದ್ಯ ರಾಜ್ಯದ ಕಾರವಾರ ಜಿಲ್ಲೆಯ ಕೈಗಾದಲ್ಲಿ ಅಣು ವಿದ್ಯುತ್​ ಸ್ಥಾವರವಿದೆ. ಪಕ್ಕದ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಥರ್ಮಲ್​ ವಿದ್ಯುತ್​ ಸ್ಥಾವರಗಳಿವೆ. ಜಿಲ್ಲೆಯಲ್ಲೂ ಸೋಲಾರ್​, ಪವನ ವಿದ್ಯುತ್​ ಉತ್ಪಾದನಾ ಟಕಗಳಿವೆ. ರಾಜ್ಯದಲ್ಲಿ, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಂದು ಅಣು ವಿದ್ಯುತ್​ ಸ್ಥಾವರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜಿಸಿದೆ. ಯೋಜನೆಗೆ 1200ಕ್ಕೂ ಹೆಚ್ಚು ಭೂಮಿ ಒಂದೇ ಕಡೆ ಅವಶ್ಯವಿದ್ದು, ಹುಡುಕಾಟ ನಡೆಸಿದೆ. ಇದರ ಭಾಗವಾಗಿ ವಿಜಯಪುರ, ರಾಯಚೂರು, ಕೊಪ್ಪಳ ಸೇರಿ ಇನ್ನೊಂದು ಜಿಲ್ಲೆ ಜಿಲ್ಲಾಡಳಿತಕ್ಕೆ ಸೂಚಿಸಿ ಜಾಗಕ್ಕೆ ತಲಾಶ್​ ನಡೆಸಿದೆ.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನಲಿನ್​ ಅತುಲ್​ ಎಲ್ಲ ತಹಸೀಲ್ದಾರ್​ಗಳಿಗೆ ಪತ್ರ ಬರೆದಿದ್ದು, 1200 ಎಕರೆ ಜಮೀನು ಗುರುತಿಸಿ ನೀಡುವಂತೆ ನಿರ್ದೇಶಿಸಿದ್ದಾರೆ. ಅದರಂತೆ ಎಲ್ಲ ತಹಸೀಲ್ದಾರ್​ಗಳು ಜಾಗ ಗುರುತಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕೊಪ್ಪಳ ತಾಲೂಕಿನ ಕರಡಿಗುಡ್ಡ ಬಳಿ ಸಮೀೆ ನಡೆಸಿದ್ದು, ಅಷ್ಟೊಂದು ಜಮೀನು ಲಭ್ಯವಾಗಿಲ್ಲ. ಹೀಗಾಗಿ ಅಕ್ಕಪಕ್ಕಕ್ಕೆ ಹೊಂದಿಕೊಂಡಿರುವ ಅರಸಿನಕೇರಿ ಹಾಗೂ ಇತರ ಸರ್ಕಾರಿ, ಪಟ್ಟಾ ಜಮೀನುಗಳ ಬಗ್ಗೆ ಸಮೀೆ ಕೈಗೊಂಡು ವರದಿ ನೀಡುವಂತೆ ಪತ್ರ ಬರೆದಿದ್ದಾರೆ.

ಎಲ್ಲ ಜಿಲ್ಲೆಗಳ ಪೈಕಿ ಯೋಜನೆ ಅನುಷ್ಠಾನಕ್ಕೆ ಸೂಕ್ತ ಜಾಗ ದೊರೆತಲ್ಲಿ ಕೇಂದ್ರ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಲಿದೆ. ಸೂಕ್ತವೆಂದು ಅಭಿಪ್ರಾಯಪಟ್ಟಲ್ಲಿ ಮುಂದಿನ ಕ್ರಮ ಜರುಗಲಿವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿ ನಲಿನ್​ ಅತುಲ್​, ಕೇಂದ್ರದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾದರೂ 1,200 ಎಕರೆಯಷ್ಟು ಜಮೀನು ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಜನರ ವಿರೋಧ : ಇನ್ನು ತಮ್ಮೂರಲ್ಲಿ ಸ್ಥಾವರ ನಿರ್ಮಾಣ ಬೇಡವೆಂದು ಈಗಾಗಳೇ ಅರಸಿನಕೇರಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಬುಧವಾರ ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಗ್ರಾಮಕ್ಕೆ ಭೇಟಿ ನೀಡಿ ರೈತರು, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು. ಸ್ಥಾವರ ನಿರ್ಮಿಸದಂತೆ ಡಿಸಿಗೆ ಮನವಿ ಸಲ್ಲಿಸಲಾಗಿದೆ. ಯಾವುದೇ ಕಾರಣಕ್ಕೂ ನಿರ್ಮಿಸಲು ಬಿಡುವುದಿಲ್ಲ. ಅಗತ್ಯ ಬಿದ್ದರೆ ಹೋರಾಡುವುದಾಗಿ ಭರವಸೆ ನಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net