

ಕೊಪ್ಪಳ: ಪವರ್ ಗ್ರಿಡ್ ಸ್ಟೇಷನ್ ನಿರ್ಮಾಣಕ್ಕೆ ಲವತ್ತಾದ ಭುಮಿ ವಶಪಡಿಸಿಕೊಳ್ಳದಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂದ ಜಿಲ್ಲಾ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ರೈತರು ಸೋಮವಾರ ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು.
ಯಲಬುರ್ಗಾ ತಾಲೂಕಿನ ಲಕಮನಗುಳೆ ಗ್ರಾಮಕ್ಕೆ ಪವರ್ ಗ್ರಿಡ್ ಮಂಜುರಾಗಿದೆ. ಅದನ್ನು ಸ್ವಾಗತಿಸುತ್ತೇವೆ. ಆದರೆ, ಸ್ಟೇಷನ್ ನಿರ್ಮಾಣಕ್ಕೆ ಲವತ್ತಾದ ಭೂಮಿ ಆಯ್ಕೆ ಮಾಡಿಕೊಂಡಿರುವುದು ಸರಿಯಲ್ಲ. ಉತ್ತಮ ಭೂಮಿ ಇದಾಗಿದ್ದು, ನೀರಾವರಿ ಸವಲಭ್ಯ ಇದ್ದಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯಬಹುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಬಹುತೇಕ ರೈತ ಕುಟುಂಬಗಳು ಜಮೀನು ನಂಬಿ ಜೀವನ ಸಾಗಿಸುತ್ತಿವೆ. ಹಲವು ವರ್ಷಗಳಿಂದ ಭುಮಿ ಅಭಿವೃದ್ಧಿಪಡಿಸಿದ್ದೇವೆ ಎಂದರು.
ಲವತ್ತಾದ ಭೂಮಿಯಲ್ಲಿ ಸ್ಟೇಷನ್ ನಿರ್ಮಿಸುವುದು ಬೇಡ. ಬದಲಿಗೆ ಅನುಪಯುಕ್ತ ಭೂಮಿಯಲ್ಲಿ ನಿರ್ಮಿಸಬೇಕು. ಇದರಿಂದ ಪವರ್ ಗ್ರಿಡ್ ನಿರ್ಮಾಣವೂ ಆಗಲಿದೆ. ಲವತ್ತಾದ ಭುಮಿ ಉಳಿಸಿಕೊಳ್ಳುವುದರಿಂದ ರೈತರ ಜೀವನಕ್ಕೂ ಆಧಾರವಾಗಲಿದೆ. ಭೂಮಿ ನೀಡಲು ರೈತರು ಯಾರೂ ಒಪ್ಪಿಲ್ಲ. ಹೀಗಾಗಿ ಭೂ ಸ್ವಾಧಿನ ಪ್ರಕ್ರಿಯೆ ನಡೆಸಬಾರದು. ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ಮನವಿ ಮಾಡಿದರು.
ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ನಾಗರಾಜ, ಪ್ರಮುಖರಾದ ದೊಡ್ಡನಗೌಡ ಪಾಟೀಲ, ಕಾಸೀಂಸಾಬ್, ಸಿದ್ದಪ್ಪ ಶಿವಪೂಜೆ, ಗವಿಸಿದ್ದಯ್ಯ ಹಿರೇಮಠ, ದೇವಪ್ಪಗೌಡ ಮಾಲಿಪಾಟೀಲ, ಅಡಿವೆಪ್ಪ ವದ್ನಾಳ, ಶಂಕರಮ್ಮ ಸಸಿ, ದೇವಮ್ಮ ಇತರರಿದ್ದರು.