ನ.10 ರಂದು ವಿವಿಧಡೆ ವಿದ್ಯುತ್​ ವ್ಯತ್ಯಯ

Published on

ಕೊಪ್ಪಳ: ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110/33/11ಕೆವಿ ಗಿಣಿಗೇರಾ ಸ್ಟೇಷನ್​ಗೆ ಒಳಪಡುವ ಎನ್​ಜಿವೈ ಲೇಬಗೇರಿ ಹಾಗೂ ಎಫ್​-13 ಎನ್​ಜಿವೈ ಹಾಲಳ್ಳಿ ಫೀಡರ್​ನ ತುರ್ತು ನಿರ್ವಹಣೆ ನಿಮಿತ್ತ ಸ್ಟೇಷನ್​ಗೆ ಒಳಪಡುವ ಎಲ್ಲ ಮಾರ್ಗಗಳಿಗೆ ನ.10 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ. ಬಸಾಪೂರ, ಕಿಡದಾಳ, ಹನುಮನಹಳ್ಳಿ, ಟಣಕನಕಲ, ಲೇಬಗೇರಿ, ಹಟ್ಟಿ ಕ್ರಾಸ್​, ಕುಟಗನಹಳ್ಳಿ, ಭೀಮನೂರ, ಗಿಣಿಗೇರಾ, ಹಳೆಕನಕಪೂರ, ಗಬ್ಬೂರ, ಹಾಲಳ್ಳಿ ಮತ್ತು ಕಲ್​ ತಾವರಗೇರಾ ಮಾರ್ಗಗಳ 11 ಕೆವಿ ಲೈನಗಳ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಎಇಇ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net