ಕೊಪ್ಪಳ: ಮುನಿರಾಬಾದ್ ಜೆಸ್ಕಾಂ ಕಚೇರಿ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸುವ ಹಿನ್ನೆಲೆಯಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆ ಏ.19ರಂದು ಬೆಳಗ್ಗೆ 11 ಗಂಟೆಗೆ ಮುನಿರಾಬಾದ್ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿರಂತರ ಸಭೆ ಹಮ್ಮಿಕೊಳ್ಳಲಾಗುತ್ತಿದೆ. ಮುನಿರಾಬಾದ್, ಹುಲಿಗಿ, ಹಿಟ್ನಾಳ, ಅಗಳಕೇರಾ, ಶಿವಪುರ, ಗಿಣಿಗೇರಾ, ಹಿರೇಬಗನಾಳ, ಕುಣಿಕೇರಾ, ಕಲ್ತಾವರಗೇರಾ, ಬಂಡಿಹರ್ಲಾಪುರ, ಬೂದುಗುಂಪಾ, ಗುಳದಳ್ಳಿ, ಬೇವಿನಹಳ್ಳಿ, ಇಂದರಗಿ, ಹೊಸಳ್ಳಿ ಗ್ರಾಪಂ ಪಿಡಿಒಗಳು ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ಎಇಇ ತಿಳಿಸಿದ್ದಾರೆ.