ಬಿಸಿಲಿಗೆ ತತ್ತರಿಸಿ ಕುಕ್ಕಟೋದ್ಯಮ

Published on

*ಮಾಂಸ, ಮೊಟ್ಟೆ ಉತ್ಪಾದನೆಯಲ್ಲಿ ಗಣನೀಯ ಇಳಿಕೆ
*ಆಹಾರ ಧಾನ್ಯಗಳ ಬೆಲೆಯೂ ಏರಿಕೆ

ಕೊಪ್ಪಳ: ಜಿಲ್ಲೆಯಲ್ಲಿ ಈವರೆಗೂ ಕಂಡಿರದಷ್ಟು ತಾಪಮಾನ ದಾಖಲಾಗಿದ್ದು ಹಲವು ದುಷ್ಪರಿಣಾಮ ಬೀರುತ್ತಿದೆ. ಜಿಲ್ಲೆಯ ಕುಕ್ಕಟೋದ್ಯಮ ರಾಜ್ಯಮಟ್ಟದಲ್ಲಿ ಹೆಸರಾಗಿದ್ದು, ಸೂರ್ಯನ ಶಾಖಕ್ಕೆ ಮಾಂಸ, ಮೊಟ್ಟೆ ಉತ್ಪನ್ನ ಕುಸಿತ ಕಾಣುವಂತಾಗಿದೆ.

ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಕೋಳಿ ಾರಂಗಳಿವೆ. ಇವುಗಳಲ್ಲಿ ಕೆಲವು ಕೇವಲ ಮಾಂಸ ಉತ್ಪಾಸಿದರೆ, ಇನ್ನು ಮೊಟ್ಟೆ ಉತ್ಪಾದನೆ ಮಾಡುತ್ತಿವೆ. 50 ಲಕ್ಷಕ್ಕೂ ಅಧಿಕ ಕೋಳಿಗಳಿದ್ದು, ನಿತ್ಯ ಲಾಂತರ ಮೊಟ್ಟೆ ಉತ್ಪಾದನೆಯಾಗುತ್ತಿವೆ. ರಾಜ್ಯ ಸೇರಿ ಹೊರ ರಾಜ್ಯಗಳಿಗೂ ಇಲ್ಲಿಂದ ಮೊಟ್ಟೆ ಪೂರೈಕೆಯಾಗುತ್ತಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕುಕ್ಕಟ ಉದ್ಯಮ ಮಂಕಾಗುವುದು ಸಹಜ. ಆದರೆ, ಈ ಬಾರಿ ಇನ್ನಿಲ್ಲದ ನಷ್ಟ ಅನುಭವಿಸುವಂತಾಗಿದೆ. ಹಿಂದಿನ ವರ್ಷಗಳಲ್ಲಿ 38-40 ಡಿಗ್ರಿ ಸೆಲ್ಸಿಯಸ್​ವರೆಗೆ ತಾಪಮಾನ ದಾಖಲಾಗುತ್ತಿತ್ತು. ಈ ವರ್ಷ 45 ಡಿಗ್ರಿ ಸೆಲ್ಸಿಯಸ್​ವರೆಗೆ ತಲುಪಿದೆ. ಜನರ ಜತೆಗೆ ಜಾನುವಾರುಗಳಿಗೂ ಸಂಕಷ್ಟ ತಂದೊಡ್ಡಿದೆ.

ಾರಂನಲ್ಲಿ ಸಾಕಣೆ ಮಾಡುವ ಕೋಳಿ ಸೂಕ್ಷ$್ಮವಾಗಿದ್ದು, ಸಮತೋಲಿತ ಪರಿಸರದಲ್ಲಿ ಮಾತ್ರ ಆರೋಗ್ಯವಾಗಿರುತ್ತವೆ. ನಿತ್ಯ ನಿಗದಿತ ಆಹಾರ, ಔಷಧೋಪಚಾರದ ಜತೆಗೆ ತಾಪಮಾನವನ್ನೂ ಕಾಯ್ದುಕೊಳ್ಳಬೇಕು. ಆದರೆ, ಬಿಸಲ ಜತೆಗೆ ಬಿಸಿಗಾಳಿ ಬೀಸುತ್ತಿದ್ದು ಕೋಳಿಗಳನ್ನು ಇನ್ನಿಲ್ಲದೆ ಬಾಧಿಸುತ್ತಿದೆ. ತಾಪಮಾನ ಕಾಯ್ದುಕೊಳ್ಳಲು ಸ್ಪಿಂಕ್ರಲ್​, ್ಯಾನ್​ ಬಳಕೆ ಮಾಡಿದರೂ ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿದೆ.
ಅರೆ-ಬರೆ ಮಳೆಯಾಗಿದ್ದು, ಸೆಕೆ, ಝಳ ಹೆಚ್ಚುತ್ತಿದೆ. ಇದರಿಂದ ಕೋಳಿ ಆಹಾರ ತ್ಯಜಿಸುತ್ತಿದ್ದು, ಆರೋಗ್ಯ ಹದಗೆಟ್ಟು ಸಾವಿಗೀಡಾಗುತ್ತಿರುವುದು ಸಾಮಾನ್ಯವಾಗಿದೆ.
ಆರೋಗ್ಯವಂತ ಕೋಳಿ ನಿತ್ಯ 120ಗ್ರಾಂನಷ್ಟು ಆಹಾರ ಸೇವಿಸುತ್ತದೆ. ಬಿಸಿಲಿನಿಂದಾಗಿ 80&90ಗ್ರಾಂನಷ್ಟು ಆಹಾರ ಸೇವಿಸುತ್ತಿವೆ. ನೀರು ಬಿಸಿಯಾಗುವುದರಿಂದ ಸೇವಿಸುವುದು ಕಡಿಮೆ ಇದರಿಂದ ರ್ನಿಜಲೀಕರಣಗೊಂಡು ರೋಗ ನಿರೋಧಕ ಶಕ್ತಿಯೂ ಕುಂದುತ್ತಿದೆ. ಮಾಂಸದ ಕೋಳಿ ತೂಕ ಕಡಿಮೆಯಾಗುತ್ತಿವೆ. ಮೊಟ್ಟೆ ಇಡುವ ಕೋಳಿಗಳಲ್ಲಿ ಮೊಟ್ಟೆ ಗಾತ್ರ ಸಣ್ಣದಾಗುವಿಕೆ, ಬಹುದಿನದವರೆಗೆ ಆರೋಗ್ಯವಾಗಿರದೆ ಕೆಟ್ಟು ಹೋಗುವುದು ಆಗುತ್ತಿದೆ. ಕೋಳಿಗಳ ಆರೋಗ್ಯ ಹದಗೆಡುತ್ತಿದ್ದು, ಆಹಾರ ಸೇವಿಸದ ಕಾರಣ ನಿತ್ರಾಣಗೊಂಡು ಜೀವ ಚೆಲ್ಲುತ್ತಿವೆ. ಚುಚ್ಚು ಮದ್ದಿನ ಜತೆಗೆ ಆಹಾರ ಸೇವನೆಯೂ ಮುಖ್ಯವಾಗಿದ್ದು, ಅನಾರೋಗ್ಯ ಪೀಡಿತವಾಗುವ ಕೋಳಿಗಳ ಏಕಾಏಕಿ ಸಾಯುತ್ತಿದ್ದು, ಪೌಲ್ಟ್ರಇ ಮಾಲೀಕರನ್ನು ನಷ್ಟಕ್ಕೆ ದೂಡುತ್ತಿದೆ.

ಮತ್ತೊಂದೆಡೆ ಕೋಳಿಗೆ ನೀಡುವ ಆಹಾರ ಧಾನ್ಯಗಳ ಬೆಲೆಯೂ ಹೆಚ್ಚಳವಾಗಿದ್ದು ನಷ್ಟದ ಪ್ರಮಾಣ ಹೆಚ್ಚಳವಾಗುವಂತೆ ಮಾಡಿದೆ. ಕೋಳಿಗೆ ಮುಖ್ಯವಾಗಿ ಮೆಕ್ಕೆಜೋಳ, ಸೋಯಾ, ಶೇಂಗಾ ಹಿಂಡಿ, ಸೂರ್ಯಕಾಂತಿ, ಭತ್ತದ ತೌಡು, ಕ್ಯಾಲ್ಸಿಯಂ ನೀಡಲಾಗುತ್ತದೆ. ಎಲ್ಲವುಗಳ ಬೆಲೆಯೂ ಅಧಿಕವಾಗಿದ್ದು, ಮಾಂಸ, ಮೊಟ್ಟೆ ಉತ್ಪಾದನೆ ದರ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಮತ್ತೊಂದೆಡೆ ಬೇಸಿಗೆ ಕಾರಣ ಮಾಂಸ, ಮೊಟ್ಟೆ ಸೇವನೆ ಪ್ರಮಾಣವೂ ಕಡಿಮೆಯಾಗಿದ್ದು ಒಟ್ಟಾರೆ ಕುಕ್ಕಟೋದ್ಯಮದ ಮೇಲೆ ಪರಿಣಾಮ ಬೀರುವಂತಾಗಿದೆ.

ಜಾನುವಾರುಗಳಿಗೂ ಸಂಕಷ್ಟ
ಕುಕ್ಕಟೋದ್ಯಮದ ಜತೆಗೆ ಜಾನುವಾರುಗಳಿಗೂ ಬೇಸಿಗೆ ಬಿಸಿಲು ಸಂಕಷ್ಟ ತಂದೊಡ್ಡಿದೆ. ಸಹಜವಾಗಿ ಬಿಸಿಲಿನಲ್ಲಿ ಜಾನುವಾರುಗಳು ಮೇಯುವ ಪ್ರಮಾಣ ಕಡಿಮೆ. ಬಯಲಿನಲ್ಲಿ ಆಹಾರ ಸಿಗುವುದು ವಿರಳ. ಹೀಗಾಗಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮೇಯಿಸುವುದು ಹೆಚ್ಚು. ಸೆಕೆಯಿಂದಾಗಿ ಆಹಾರ, ನೀರು ಸೇವನೆ ಕಡಿಮೆಯಾದಲ್ಲಿ ನಿತ್ರಾಣಗೊಂಡು ಹಲವು ರೋಗಗಳು ಬರುವ ಸಾಧ್ಯತೆ ಹೆಚ್ಚು. ಇಲಾಖೆಯಿಂದ ಈಗಾಗಲೇ ಕಾಲು&ಬಾಯಿ ಲಸಿಕಾಕರಣವಾಗಿದ್ದು, ಮುಂಜಾಗ್ರತೆವಹಿಸಲು ಸೂಚನೆಯನ್ನು ನೀಡಿದ್ದು, ಜಾನುವಾರು ಮಾಲೀಕರು ಕಾಳಜಿವಹಿಸಬೇಕಿದೆ.

ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಿದೆ. ಸಹಜವಾಗಿ ಇದು ಜಾನುವಾರು, ಕುಕ್ಕಟೋದ್ಯಮದ ಮೇಲೆ ಪರಿಣಾಮ ಬೀರಿದೆ. ಕೋಳಿ ಾರಂಗಳಲ್ಲಿ ತಾಪಮಾನ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಆಹಾರ ಸೇವನೆ ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಇದರಿಂದ ಕೋಳಿಗಳು ಸಾಯಲಿವೆ. ಜತೆಗೆ ಮೊಟ್ಟೆ ಉತ್ಪಾದನೆ ಕಡಿಮೆಯಾಗಲಿದೆ. ಡಾ.ಎಂ.ಪಿ.ಮಲ್ಲಯ್ಯ. ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಕೊಪ್ಪಳ.

ಡಾ.ಎಂ.ಪಿ.ಮಲ್ಲಯ್ಯ. ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net