ಕವಿತೆ ಹೊಸತನದಿಂದ ತುಂಬಿರಲಿ

district koppal poem poets koppal festival celebration
Published on

ಕೊಪ್ಪಳ: ಹಳೆಯ ಸಾಹಿತ್ಯಿಕ ಪ್ರಾಕಾರಗಳ ಜತೆಗೆ ಹೊಸ ಸಾಹಿತ್ಯವನ್ನೂ ಅಳವಡಿಸಿಕೊಂಡು ಬರವಣಿಗೆಯಲ್ಲಿ ತೊಡಗಬೇಕೆಂದು ಬರಹಗಾರ ವಿಜಯ ಅಮೃತರಾಜ್​ ಹೇಳಿದರು.

ಯುಗಾದಿ ಹಾಗೂ ರಂಜಾನ್​ ಹಬ್ಬ ಅಂಗವಾಗಿ ಕವಿ ಸಮೂಹ ಕೊಪ್ಪಳ, ಬಹುತ್ವ ಭಾರತ ಬಳಗದಿಂದ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಮಾತನಾಡಿದರು.

ಕವಿತೆ ಹೊಸತನದಿಂದ ಕೂಡಿರಬೇಕು. ಜಾನಪದ ಬದುಕು, ಪರಂಪರೆ ಒಳಗೊಂಡಿರಲಿ. ಅದನ್ನು ಉಳಿಸುವ ಕೆಲಸ ಮಾಡೋಣ. ಕನ್ನಡದಲ್ಲಿ ವಿಟ್​ ಪ್ರಕಾರ ಇದುವರೆಗೆ ಬಂದಿಲ್ಲ. ಕೌಬಾಯ್​ ಪದ್ಯಗಳು ಬರೆಯುವ ಪ್ರಯತ್ನ ನಡೆಯಬೇಕು. ಸಾಹಿತ್ಯದ ಬಗ್ಗೆ ನಿರಂತರ ಚರ್ಚೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಕವಿಗಳಾದ ಅರುಣಾ ನರೇಂದ್ರ ರಂಜಾನ್​ ಹಾಗೂ ಯುಗಾದಿ ಕುರಿತ ಕವಿತೆ ವಾಚಿಸಿದರು. ಪುಷ್ಪಲತಾ ಏಳುಭಾವಿ- ನನ್ನ ಕೊಂದುಬಿಡು ಹಾಗೂ ಅಂದು ಮತ್ತು ಇಂದು, ಶ್ರೀನಿವಾಸ್​ ಚಿತ್ರಗಾರ್​ -ಡುಬ್ಬ ಚಪ್ಪರಿಸುವವರು ಹಾಗೂ ಕಟ್ಟ ಕಡೆಯ ಹಾದಿ, ಜಿ.ಎಸ್​. ಗೋನಾಳ್​ ಶಾಂತಿ ಪ್ರೀತಿ ಸೌಹಾರ್ದತೆ ರಂಜಾನ್​ ಮತ್ತು ಯುಗಾದಿ, ವಿಜಯ ಅಮೃತರಾಜ್​-- ಯುಗಾದಿ ಹಾಗೂ ರಂಜಾನ್​, ಪಿ.ಎಸ್​.ಅಮರದೀಪ ಬೇವು ಬೆಲ್ಲ , ಖಾಲಿ ಬಿಳಿಹಾಳೆ, ಬಿ.ಎಸ್​.ವೀರಾಪುರ - ಕೊಪ್ಪಳ ಉಳಿಸೋಣ ಬನ್ನಿ, ಯುಗಾದಿ ಹರುಷ ತರಲಿ, ಬೀರಪ್ಪ ಅಂಡಗಿ ಕಿವಿ , ಅನಸೂಯ ಜಹಗೀರದಾರ್​- ಅಳಲಾರದ ಮಕ್ಕಳು ಹಾಗೂ ಯುಗಾದಿ ಚೈತ್ರಳ ಸ್ವಗತ ಕವಿತೆ, ಸಿರಾಜ್​ ಬಿಸರಳ್ಳಿ - ದ್ವಿಪದಿಗಳು , ನನಗೆ ನಿನ್ನ ದರ್ಶನ ಭಾಗ್ಯವಿಲ್ಲ ಎನ್ನುವ ಕವಿತೆ ವಾಚಿಸಿದರು.

ಮೌಲಾ ಹುಸೈನ್​ ತಳಕಲ್​, ಮಂಜು ತೋಟಗಾರ , ನರೇಂದ್ರ ಪಾಟೀಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net