ಬಾಲಕಿ ಮೇಲೆ ಅತ್ಯಾಚಾರ, ಯುವಕನ ವಿರುದ್ಧ ಪ್ರಕರಣ

Published on

ಕೊಪ್ಪಳ: ಗದಗ ಜಿಲ್ಲೆಯ ಬಾಲಕಿಯೊಬ್ಬಳನ್ನು ಮದುವೆಯಾಗಿ ಅತ್ಯಾಚಾರ ಎಸಗಿದ ಯುವಕನ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ಬುಧವಾರ ರಾತ್ರಿ ಪ್ರಕರಣ ದಾಖಲಾಗಿದೆ.

ಕೊಪ್ಪಳದ ಶ್ರೀನಿವಾಸ ಭೋವಿ ಆರೋಪಿ. 13 ವರ್ಷದ ಬಾಲಕಿಯನ್ನು ಪರಿಚಯಿಸಿಕೊಂಡು ೋನ್​ನಲ್ಲಿ ಮಾತನಾಡುತ್ತಿದ್ದ. ಬಳಿಕ ಪ್ರೀತಿಸಿದ್ದಾರೆ. ಸೆ.7ರಂದು ಬಾಲಕಿ ಮನೆಯಿಂದ ಕಾಣೆಯಾಗಿದ್ದಾಳೆ. ಸೆ.10ರಂದು ಕೊಪ್ಪಳ ಮಹಿಳಾ ಠಾಣೆಗೆ ಬಂದಿದ್ದಾಳೆ. ಪೊಲೀಸರು ಬಾಲಕಿ ಚಿಕ್ಕಪ್ಪನಿಗೆ ಕರೆ ಮಾಡಿ ಬಾಲಕಿ ಠಾಣೆಯಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಪಿ ಅಪ್ರಾಪ್ತಳನ್ನು ಕರೆದೊಯ್ದು ಹುಲಿಗಿಯಲ್ಲಿ ಮದುವೆಯಾಗಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದು, ಆನಂತ ಬಿಟ್ಟು ಹೋಗಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕಿ ಚಿಕ್ಕಪ್ಪ ಯಾಶಿನ್​ಸಾಬ್​ ನೀಡಿದ ದೂರಿನ ಅನ್ವಯ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net