ಅತ್ಯಾಚಾರಿಗೆ ಏಳು ವರ್ಷ ಸೆರೆವಾಸ ವಿಧಿಸಿದ ಕೋರ್ಟ್​

Published on

ಕೊಪ್ಪಳ: ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಏಳು ವರ್ಷ ಸೆರೆವಾಸ ಮತ್ತು 25 ಸಾವಿರ ರೂ. ದಂಡ ವಿಧಿಸಿ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.

ಮೆಹಬೂಬ್​ ಅಲಿ ಬಸಾಪು ಎಂಬಾತ ಶಿೆಗೆ ಗುರಿಯಾದಾತ. 2020ರ ಜೂನ್​ 10ರಂದು ಬಾಲಕಿ ತನ್ನ ಮನೆ ಮುಂದೆ ನಿಂತಿದ್ದಳು. ಆಗ ಅಂಗಡಿಗೆ ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ. ಪಕ್ಕದಲ್ಲಿದ್ದ ಜನತಾ ಮನೆಯಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಾಲಕಿ ಕಿರುಚಿದರೂ ಬಾಯಿ ಮುಚ್ಚಿ ರೇಪ್​ ಮಾಡಿದ್ದ. ಈ ಬಗ್ಗೆ ಮುನಿರಾಬಾದ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ ಗ್ರಾಮೀಣ ಸಿಪಿಯ ಆಗಿದ್ದ ರವಿ ಉಕ್ಕುಂದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕುಮಾರ್​ ಡಿ.ಕೆ. ಮೆಹಬೂಬ್​ ಅಲಿ ಅಪರಾಧಿಯೆಂದು ಘೊಷಿಸಿ, ಏಳು ವರ್ಷ ಸೆರೆವಾಸ ಮತ್ತು 25 ಸಾವಿರ ರೂ. ದಂಡ ವಿಧಿಸಿ ಅ.30ರಂದು ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net