ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ರಾಜಾಸಾಬ ಹಳ್ಳಿಕೇರಿ ಶಿಕ್ಷೆಗೆ ಗುರಿಯಾದಾತ. ಬಾಲಕಿಯನ್ನು ಪರಿಚಯಿಸಿಕೊಂಡ ರಾಜಾಸಾಬ್ ಪ್ರೀತಿಸುವುದಾಗಿ ಪುಸಲಾಯಿಸಿದ್ದ. 2022ರ ಜನೆವರಿ 30 ರಂದು ಬಾಲಕಿಯನ್ನು ತಳಕಲ್ ಗೆ ಕರೆದೊಯ್ದು ಮದುವೆ ಆಗಿದ್ದಾನೆ. ಅಲ್ಲಿಂದ ನಿಟ್ಟಾಲಿ ಗ್ರಾಮಕ್ಕೆ ಹೋಗಿ ರಾತ್ರಿಯಾಗಿದ್ದರಿಂದ ಬಸ್ ನಿಲ್ದಾಣದಲ್ಲಿ ಮಲಗಿಕೊಂಡಿದ್ದಾರೆ. ಅಲ್ಲಿಂದ ಭಾನಾಪುರಕ್ಕೆ ತೆರಳಿ ರೈಲು ಹಾಗೂ ಬಸ್ ಮೂಲಕ ಮಂಗಳೂರಿನ ಸುಳ್ಯಕ್ಕೆ ತೆರಳಿದ್ದಾರೆ. ಮದುವೆ ಬಗ್ಗೆ ಹುಡುಗಿ ಮಾವನಿಗೆ ಕರೆ ಮಾಡಿ ಮದುವೆ ಮಾಡಬೇಕು. ಇಲ್ಲದಿದ್ದರೆ ಹೆಣ ನೋಡುತ್ತೀರಿ ಎಂದು ಬೆದರಕೆ ಹಾಕಿದ್ದ.