ಅತ್ಯಾಚಾರಿಗೆ 20 ವರ್ಷ ಜೈಲು ಶಿಕ್ಷೆ

Published on

ಕೊಪ್ಪಳ : ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿರುವ ಅಪರಾಧಿ ಶೌಕತ್​ ಅಲಿ ಗುದ್ದಡಬಾವಿ ಎಂಬಾತನಿಗೆ 20 ವರ್ಷ ಜೈಲು ಶಿೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ಆದೇಶಿಸಿದೆ.

ಕುಷ್ಟಗಿ ನಿವಾಸಿ ಶೌಕತ್​ ಅಲಿ ಶಿೆಗೆ ಗುರಿಯಾದಾತ. ಅಪ್ರಾಪ್ತಳನ್ನು ಪರಿಚಯಿಸಿಕೊಂಡು ಪ್ರೀತಿಸುವುದಾಗಿ ನಂಬಿಸಿದ್ದ. 2023ರ ಏಪ್ರೀಲ್​ 3ರಂದು ಬಾಲಕಿ ಮನೆಪಾಠ ಮುಗಿಸಿಕೊಂಡು ವಾಪಸ್​ ಬರುವಾಗ ಮಸೀದಿ ಬಳಿ ಬಂದು ಕರೆದೊಯ್ದಿದ್ದ. ಮದುವೆಯಾಗುವುದಾಗಿ ಪುಸಲಾಯಿಸಿ ಸಂಬಂಧಿಕರ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಮರು ದಿನವೂ ಬಲತ್ಕಾರ ಮಾಡಿದ್ದಾನೆ. ಈ ಬಗ್ಗೆ ಕುಷ್ಟಗಿ ಪೊಲೀಸ್​ ಠಾಣೆ ಪಿಎಸ್​ಐ ಚಂದ್ರಶೇಖರ ದೂರು ದಾಖಲಿಸಿಕೊಂಡಿದ್ದರು.

ಸಿಪಿಐ ನಿಂಗಪ್ಪ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಶೌಕತ್​ ಅಲಿ ವಿರುದ್ಧದ ಆರೋಪವು ಸಾಬೀತಾಗಿದೆ. ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿದ ನ್ಯಾಯಾಧೀಶ ಕುಮಾರ ಡಿ.ಕೆ. ಅವರು 20 ವರ್ಷ ಜೈಲು ಶಿೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಡಿ.5ರಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆ. ಕುಕನೂರು ಪೊಲೀಸ್​ ಠಾಣೆ ಸಿಬ್ಬಂದಿ ಹನುಮೇಶ ಜಗ್ಗಲ್​ ಸಾಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕರಿಸಿದ್ದಾಗಿ ಅಭಿಯೋಜಕಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net