ಕೊಪ್ಪಳ: ಪರಿಶಿಷ್ಟ ಜಾತಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ) ಸೋಮವಾರ ಆದೇಶಿಸಿದೆ.
ಕುಷ್ಟಗಿ ತಾಲೂಕಿನ ಪರಮನಹಟ್ಟಿಯ ಹನುಮಂತ ಕುಂಬಾರ ಶಿೆಗೆ ಗುರಿಯಾದಾತ. ಬಾಲಕಿಯನ್ನು ಪರಿಚಯಿಸಿಕೊಂಡ ಹನುಮಂತ ಪ್ರೀತಿಸುವುದಾಗಿ ನಂಬಿಸಿದ್ದ. ಬಾಲಕಿ ನಿರಾಕರಿಸಿದರೂ ಪುಸಲಾಯಿಸಿ 2023ರ ಮೇ 10ರಂದು ಅತ್ಯಾಚಾರ ಎಸಗಿದ್ದ. 2023ರ ಜುಲೈ 31ರಂದು ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದ. ಈ ಸಂಬಂಧ ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ಪ್ರಶಾಂತ ಎಚ್.ಎಸ್. ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ನಿರ್ವಹಿಸಿದ್ದರು. ಕೊಪ್ಪಳ ಡಿಎಸ್ಪಿ ಶರಣಬಸಪ್ಪ ಸುಬೇದಾರ ಹೆಚ್ಚುವರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಿಎಚ್ಸಿ ಶಿವಕುಮಾರ ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು, ಆರೋಪ ಸಾಬೀತಾಗಿದ್ದರಿಂದ ಹನುಮಂತನನ್ನು ಅಪರಾಧಿಯೆಂದು ಘೋಷಿಸಿದ್ದಾರೆ. 20 ವರ್ಷ ಜೈಲು ಶಿೆ, 30 ಸಾವಿರ ರೂ. ದಂಡ ವಿಧಿಸಿದ್ದಾರೆ. ಬಾಲಕಿಗೆ ಸರ್ಕಾರದಿಂದ 6 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಅಪರ್ಣ ಬಂಡಿ, ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ. ಬೇವೂರು ಠಾಣೆ ಸಿಬ್ಬಂದಿ ಮಂಜುನಾಥ ನ್ಯಾಯಾಲಯಕ್ಕೆ ಸಾದಾರನ್ನು ಹಾಜರುಪಡಿಸಿ ಸಹಕರಿಸಿದ್ದಾರೆಂದು ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.