ಅತ್ಯಾಚಾರ, ಜಾತಿ ನಿಂದನೆ, ಯುವಕ ಬಂಧನ

Published on

ಕೊಪ್ಪಳ: ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿ ಜಾತಿ ನಿಂದನೆ ಮಾಡಿದ ಆರೋಪದಡಿ ಯುವಕನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತಾಲೂಕಿನ ಗಂಗನಾಳ ಗ್ರಾಮದ ಮಾರುತಿ ಕುರುಬರ ಬಂಧಿತ. ಆರೋಪಿ ಕುಟುಂಬದವರಾದ ಈಶಪ್ಪ ಕುರುಬರು, ಹನುಮಮ್ಮ ಕುರುಬರು, ದ್ಯಾಮವ್ವ ಕುರುಬರು, ಯಮನಮ್ಮ ಕುರುಬರು, ಹನುಮೇಶ ಕುರುಬರು ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ಪ್ರೀತಿಸುವುದಾಗಿ ತಿಳಿಸಿದ ಯುವಕ ಜು.2ರಂದು ಬಲವಂತವಾಗಿ ಕರೆದೊಯ್ದು ಮದುವೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದಾರೆ. ತಾನು ಅಪ್ರಾಪ್ತೆ ಎಂದು ಬಾಲಕಿ ಹೇಳಿದರೂ ಒತ್ತಾಯದಿಂದ ಮದುವೆ ಮಾಡಿದ್ದಾರೆ. ಅಲ್ಲದೇ ಅತ್ಯಾಚಾರ ಎಸಗಿದ್ದಾನೆ.

ಜು.30ರಂದು ಪಾಲಕರೊಡನೆ ಮಾತನಾಡುತ್ತೇನೆಂದು ಬಾಲಕಿ ಕೇಳಿಕೊಂಡಿದ್ದಾಳೆ. ಈ ವೇಳೆ ಯುವಕನ ಕುಟುಂಬದವರು ಜಾತಿ ನಿಂದನೆ ಮಾಡಿದ್ದಾರೆಂದು ಬಾಲಕಿ ದೂರು ನೀಡಿದ್ದಾಳೆ. ದೂರು ಆಧರಿಸಿ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ದಸ್ತಗಿರಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net