ಮೌಲ್ಯವರ್ಧನೆಯಿಂದ ಆದಾಯ ವೃದ್ಧಿ, ಸಂಸದ ಹಿಟ್ನಾಳ ಅಭಿಮತ

district koppal pmfme scheme mp rajashekhar itnal
Published on

ಕೊಪ್ಪಳ: ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೊಳಿಸುವ ಮೂಲಕ ರೈತರು ಆದಾಯ ವೃದ್ಧಿಸಿಕೊಳ್ಳಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್​ಎಂಇ) ಯೋಜನೆಯ ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರು ದೇಶದ ಬೆನ್ನೆಲಬು. ಆದರೆ ಅವರಿಗೆ ಆದಾಯ ಕಡಿಮೆ. ಅವರ ಉತ್ಪನ್ನ ಮಾರಾಟ ಮಾಡುವ ಕಂಪನಿಗೆ ಹೆಚ್ಚು ಲಾಭ. ನೀವು ಬೆಳೆದ ಬೆಳೆಗಳ ಮೌಲ್ಯ ವೃದ್ಧಿಸಿ ನೀವೇ ಬ್ರ್ಯಾಂಡ್​ ಮಾಡಿ ಲಾಭ ಪಡೆಯಿರಿ. ಕೇಂದ್ರ ಸರ್ಕಾರ ಪಿಎಂಎ್​ಎಂಇ ಯೋಜನೆ ಜಾರಿಗೊಳಿಸಿದ್ದು, 15 ಲ ಕ್ಷ ರೂ.ವರೆಗೆ ಸಹಾಯಧನ ಸಿಗಲಿದೆ. ಅದರ ಸದುಪಯೋಗ ಪಡೆಯಿರಿ. ಲೀಡ್​ ಬ್ಯಾಂಕಿನವರು ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳಿಗೆ ಬ್ಯಾಂಕುಗಳು ಮಂಜೂರಾತಿ ನೀಡುವಂತೆ ಸೂಚಿಸಬೇಕು. ಕೃಷಿ ಅಧಿಕಾರಿಗಳು ಯೋಜನೆ ಬಗ್ಗೆ ಇನ್ನಷ್ಟು ಅರಿವು ಮೂಡಿಸಿ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಮಾತನಾಡಿ, ನಮ್ಮದು ಕೃಷಿ ಪ್ರಧಾನ ದೇಶ. ರೈತರ ಬೆಳೆಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಸಿಗುತ್ತಿಲ್ಲ. ಅನ್ನದಾತರು ಕಿರು ಆಹಾರ ಸಂಸ್ಕರಣೆ ಮಾಡಿ ಮೌಲ್ಯವರ್ಧಿಸಿ ಮಾರಾಟ ಮಾಡಿ. ಮಾರುಕಟ್ಟೆ, ಬ್ರ್ಯಾಂಡಿಗ್​ ಮಾಡಿದಲ್ಲಿ ಬೆಲೆ ಬರಲಿದೆ. ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆಗೆ ಪೂರಕ ವಾತಾವರಣವಿದೆ. ಮೌಲ್ಯವರ್ಧನೆಗೆ ವಿುಲ ಅವಕಾಶಗಳಿವೆ. ಈವರೆಗೆ 178 ಲಾನುಭವಿಗಳು ಯೋಜನೆ ಲಾಭ ಪಡೆದಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ 300 ಲಾನುಭವಿಗಳು ಸೌಲಭ್ಯ ಪಡೆಯಬೇಕು. ನಮ್ಮ ಜಿಲ್ಲೆಯಲ್ಲಿನ ಉತ್ಪನ್ನಗಳನ್ನು ನಮ್ಮಲ್ಲೇ ಬಳಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಎಂಎಫ್​ಎಂಇ ಯೋಜನೆಯ ತಂಡದ ನಾಯಕ ಅರವಿಂದ ಕೆ., ಯೋಜನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಲಾನುಭವಿಗಳಿಗೆ ಸಾಲ ಮಂಜೂರಾತಿ ಪ್ರಮಾಣ ಪತ್ರ ವಿತರಿಸಲಾಯಿತು. ಯಶಸ್ವಿ ಉದ್ದಿಮೆದಾರರಿಗೆ ಸನ್ಮಾನಿಸಲಾಯಿತು. ಎಂಎಫ್​ಎಂಇ ಯೋಜನೆಯ ಮಾಹಿತಿ ಒಳಗೊಂಡ ಕರಪತ್ರ ಹಾಗೂ ಕಿರು ಆಹಾರ ಉತ್ಪನ್ನಗಳ ಬ್ರ್ಯಾಂಡಿಂಗ್​ ಮಾದರಿಗಳನ್ನು ಬಿಡುಗಡೆಗೊಳಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಪಂ ಸಿಇಒ ವರ್ಣಿತ್​ ನೇಗಿ, ಕೃಷಿ ನಿರ್ದೇಶಕ ಸಿದ್ದೇಶ್ವರ ಎಲ್​., ಕೃಷಿ ವಿಜ್ಞಾನಿಗಳಾದ ರಾವೇಂದ್ರ ಎಲಿಗಾರ, ಎಂ.ವಿ.ರವಿ, ಲೀಡ್​ ಬ್ಯಾಂಕ್​ ಮ್ಯಾನೇಜರ್​ ಮಾರುತಿ, ಕೃಷಿಕ ಸಮಾಜ ಅಧ್ಯಕ್ಷ ನವೋದಯ ವಿರುಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net